ಹುಬ್ಬಳ್ಳಿ: ರಣಜಿ ಟೂರ್ನಿಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಜಮ್ಮು ಕಾಶ್ಮೀರ ತಂಡ ಫೈನಲ್‌ಗೆ ಪ್ರವೇಶ ಪಡೆದಿದೆ. ಈಗಾಗಲೇ ಕರ್ನಾಟಕದ ವಿರುದ್ಧ ಫೈನಲ್ಸ್ ಪ್ರಾರಂಭವಾಗಿದ್ದು ಜಮ್ಮು ಕಾಶ್ಮೀರ ಮೇಲುಗೈ ಸಾಧಿಸಿದೆ.
ಇದೀಗ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ತಮ್ಮ ತಂಡದ ಗೆಲುವನ್ನು ವೀಕ್ಷಿಸಲು ಆಗಮಿಸಲಿದ್ದಾರೆ ಎನ್ನುವ ಸುದ್ದಿ ಹರಡಿದೆ.

ಇದನ್ನೂ ಓದಿ: ಮರ್ಮಾಂಗ ಕತ್ತರಿಸಿ ಪತಿಯ ಭೀಕರ ಹತ್ಯೆ: ಪತ್ನಿ-ಮಗನಿಂದಲೇ ಕೊಲೆ, ಬಾಮೈದನ ಸಾಥ್
ಇಲ್ಲಿನ ರಾಜನಗರ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ನಡೆಯುತ್ತಿದೆ.
ಜಮ್ಮು ಕಾಶ್ಮೀರ ತಂಡ ಪ್ರಥಮ ಇನ್ನಿಂಗ್ಸ್ ನಲ್ಲಿ 584 ರನ್ ಗಳಿಸಿದೆ. ಕರ್ನಾಟಕ ತಂಡಕ್ಕೆ ಸವಾಲನ್ನೊಡಿದೆ. ಕರ್ನಾಟಕ ತಂಡ ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಇದೆ.
ಶುಕ್ರವಾರ ಸಂಜೆ 7.20ಕ್ಕೆ ಹುಬ್ಬಳ್ಳಿಗೆ ಬರುವ ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಐದನೇ ದಿನದ ಆಟ ವೀಕ್ಷಿಸಲಿದ್ದಾರೆ. ಮೈದಾನದಲ್ಲಿ ಈಗಲೇ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ. ಜಮ್ಮು-ಕಾಶ್ಮೀರದ ಐತಿಹಾಸಿಕ ಸಾಧನೆ ನೋಡಲಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

