Breaking News

Ranaji Trophy: ಚೊಚ್ಚಲ ರಣಜಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜಮ್ಮು ಕಾಶ್ಮೀರ

ಹುಬ್ಬಳ್ಳಿ: ಇದೇ ಮೊದಲ ಬಾರಿಗೆ ರಣಜಿ ಇತಿಹಾಸದಲ್ಲಿ ಪ್ರಶಸ್ತಿ‌ ಸುತ್ತಿಗೆ ಅರ್ಹತೆ ಪಡೆದಿದ್ದ ಪಾರಸ್ ಡೋಗ್ರ ನೇತೃತ್ವದ ಜಮ್ಮು-ಕಾಶ್ಮೀರ ತಂಡ ಪೈನಲ್ಸ್‌ನಲ್ಲಿ ಕರ್ನಾಟಕ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.

ಫೈನಲ್‌ ಪಂದ್ಯದ 5ನೇ ದಿನ ಜಮ್ಮು-ಕಾಶ್ಮೀರ ತಂಡ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ಲೀಡ್‌ ಆಧಾರದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

Advertisement

ಇದನ್ನೂ ಓದಿ: ಪ್ರಾಂಶುಪಾಲರ ಅಮಾನತು ‘ಒಣ ಪ್ರತಿಷ್ಠೆ ರಾಜಕಾರಣ’: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಕಿಶೋರ್ ಕುಮಾರ್ ಕಿಡಿ!

4 ನೇ ದಿನದಾಟದ ಅಂತ್ಯಕ್ಕೆ 57 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ 477 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದ ಜಮ್ಮು-ಕಾಶ್ಮೀರ ಪಂದ್ಯದ ಕೊನೆ ದಿನವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು.

ನಾಲ್ಕನೇ ದಿನದಲ್ಲಿ 94 ರನ್‌ಗಳಿಸಿದ್ದ ಖಮ್ರಾನ್‌ ಇಕ್ಬಾಲ್‌ ಕೊನೆ ದಿನ ಶತಕ ಪೂರೈಸಿದರು. 311 ಬಾಲ್‌ಗಳಿಗೆ ಅಜೇಯ 160 ರನ್‌ ಕಲೆಹಾಕಿದರು. ಸಾಹಿಲ್‌ ಲೋತ್ರಾ ಅಜೇಯ 101 ರನ್‌ ಗಳಿಸಿದರು. ಇಬ್ಬರ ಬ್ಯಾಟಿಂಗ್‌ ನೆರವಿನಿಂದ ಜೆ&ಕೆ ತಂಡವು 113 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 342 ರನ್‌ ಗಳಿಸಿತು. ಈ ವೇಳೆ ‘ಡ್ರಾ’ಗೆ ಕರೆ ನೀಡಲಾಯಿತು.

ಫೆಬ್ರವರಿ 28 ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್‌ಗೆ ಸ್ಮರಣೀಯ ದಿನವಾಗಿ ಉಳಿಯುತ್ತದೆ. 1959-60ರ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ ತಂಡವು ಅಂತಿಮವಾಗಿ ಭಾರತದ ಅತಿದೊಡ್ಡ ದೇಶೀಯ ಸ್ಪರ್ಧೆಯ ಪದಕವನ್ನು ಪಡೆದುಕೊಂಡಿದೆ.

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ನಂತರ ಪರಾಸ್ ಡೋಗ್ರಾ ನೇತೃತ್ವದ ತಂಡವು ಕರ್ನಾಟಕವನ್ನು ಸೋಲಿಸಿ 2025-26ರ ಋತುವಿನಲ್ಲಿ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು