ಕಡಬ: ತಲೆನೋವಿನ ಔಷಧ ಸೇವಿಸಿದ ಪರಿಣಾಮ 10 ವರ್ಷದ ಬಾಲಕ ಮೃತಪಟ್ಟಿರುವ ದುಃಖಕರ ಘಟನೆ ರಾಮಕುಂಜದಲ್ಲಿ ನಡೆದಿದೆ. ಈ ಸಂಬಂಧ ಬಾಲಕನ ತಂದೆ ಸಂಜೀವ ಪೂಜಾರಿ (50) ಅವರು ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಬಾಲಕನಿಗೆ ಆಗಾಗ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಮಾರ್ಚ್ 18ರ ಸಂಜೆ, ಮನೆದಲ್ಲಿದ್ದ ತಲೆನೋವಿನ ಔಷಧವನ್ನು ಮಗನು ಸೇವಿಸಿದ್ದಾನೆ ಎಂದು ಪತ್ನಿ ಮಾಹಿತಿ ನೀಡಿದಾಗ, ತಕ್ಷಣವೇ ಮನೆಗೆ ಧಾವಿಸಿದ ತಂದೆ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದರು.

ಇದನ್ನೂ ಓದಿ: ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿ ದುರಂತ: ಪಿಯು ವಿದ್ಯಾರ್ಥಿ ನೀರುಪಾಲು
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಬಾಲಕನು ಆಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

