Breaking News

ನಾನು ಸತ್ತರೆ ಮುಂದೇನು? ಆಪ್ತರಿಗೆ ಇರಾನ್ ಸುಪ್ರೀಂ ಲೀಡರ್ ಖಮೇನಿ ಮಹತ್ವದ ಸೂಚನೆ!

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ತನ್ನ ಹತ್ಯೆಗೆ ಸಂಚು ರೂಪಿಸಬಹುದು ಎಂಬ ಭೀತಿಯ ನಡುವೆ, ಅಯಾತೊಲ್ಲಾ ಅಲಿ ಖಮೇನಿ ಅವರು ತಮ್ಮ ಉತ್ತರಾಧಿಕಾರ ಮತ್ತು ಆಡಳಿತದ ಕುರಿತು ಆಪ್ತರಿಗೆ ಗುಪ್ತವಾಗಿ ಮಾರ್ಗದರ್ಶನ ನೀಡಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ತಾವು ಇಲ್ಲವಾದರೆ, ರೆವಲ್ಯೂಷನರಿ ಗಾರ್ಡ್ಸ್‌ನ ಮಾಜಿ ಕಮಾಂಡರ್ ಮತ್ತು ಹಿರಿಯ ರಾಜಕಾರಣಿ ಅಲಿ ಲಾರಿಜಾನಿ ಅವರನ್ನು ಆಡಳಿತದ ಉಸ್ತುವಾರಿ ನೋಡಿಕೊಳ್ಳಲು ನೇಮಿಸಬೇಕು ಎಂದು ಖಮೇನಿ ಸೂಚಿಸಿದ್ದಾರೆ. ಲಾರಿಜಾನಿ ಅವರು ಈಗಾಗಲೇ ಇರಾನ್‌ನ ವಿದೇಶಾಂಗ ನೀತಿ, ಅಮೆರಿಕ ಜೊತೆಗಿನ ಅಣ್ವಸ್ತ್ರ ಮಾತುಕತೆ ಮತ್ತು ರಷ್ಯಾ-ಕತಾರ್‌ನಂತಹ ಮಿತ್ರರಾಷ್ಟ್ರಗಳ ಸಮನ್ವಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಲಾರಿಜಾನಿ ಅವರಿಗೆ ಆಡಳಿತದ ಜವಾಬ್ದಾರಿಯನ್ನು ನೀಡಲಾಗುತ್ತದೆಯೇ ಹೊರತು, ಅವರನ್ನು ‘ಸರ್ವೋಚ್ಚ ಧಾರ್ಮಿಕ ನಾಯಕ’ (Supreme Leader) ಎಂದು ನೇಮಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಆ ಸ್ಥಾನಕ್ಕೆ ಬೇಕಾದ ಶಿಯಾ ಪಂಗಡದ ಉನ್ನತ ಧಾರ್ಮಿಕ ಅರ್ಹತೆಯನ್ನು ಹೊಂದಿಲ್ಲ ಎನ್ನಲಾಗಿದೆ.ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಇರಾನ್ ಮೇಲೆ ಸೀಮಿತ ದಾಳಿ ನಡೆಸುವ ಅಥವಾ ಖಮೇನಿ ಮತ್ತು ಅವರ ಪುತ್ರನನ್ನು ಗುರಿ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.

Advertisement

ಇದನ್ನೂ ಓದಿ: ಪಾಲುದಾರ ರಾಷ್ಟ್ರಗಳಿಗೆ ಸುಂಕ ವಿಧಿಸುವ ಹಕ್ಕು ನಿಮಗಿಲ್ಲ ಟ್ರಂಪ್: ತುರ್ತು ಅಧಿಕಾರ ಬಳಕೆಗೆ ಅಮೆರಿಕ ಸುಪ್ರೀಂ ಕೋರ್ಟ್ ತಡೆ!

ಇಸ್ರೇಲ್ ಜೊತೆಗಿನ ಉದ್ವಿಗ್ನತೆಯ ನಡುವೆಯೂ ಅಮೆರಿಕದೊಂದಿಗೆ ಅಣ್ವಸ್ತ್ರ ಒಪ್ಪಂದದ ಮಾತುಕತೆಗಳನ್ನು ಹೇಗೆ ಮುಂದುವರಿಸಬೇಕು ಎಂಬುದರ ಬಗ್ಗೆಯೂ ಖಮೇನಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇರಾನ್‌ನ ಆಂತರಿಕ ರಾಜಕೀಯ ಮತ್ತು ಭದ್ರತೆಯ ದೃಷ್ಟಿಯಿಂದ ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು