Breaking News

ಚಿತ್ರದುರ್ಗ: ಅಪಘಾತದಲ್ಲಿ ಡಿವೈಎಸ್‌ಪಿಗೆ ಗಂಭೀರ ಗಾಯ, ತಾಯಿ, ಕಾರು ಚಾಲಕ ಸಾವು

Kollapur DySP seriously injured in accident his mother and car driver die in Chitradurga

ಚಿತ್ರದುರ್ಗ: ಪ್ರವಾಸ ಮುಗಿಸಿ ವಾಪಸ್‌ ಆಗುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊಲ್ಲಾಪುರದ ಡಿವೈಎಸ್‌ಪಿ ಗಂಭೀರವಾಗಿ ಗಾಯಗೊಂಡು ಅವರ ತಾಯಿ ಮತ್ತು ಕಾರು ಚಾಲಕ ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್‌ ಬಳಿ ನಡೆದಿದೆ.

ಪೊಲೀಸ್‌ ಅಧಿಕಾರಿ ವೈಷ್ಣವಿ ಸೇರಿ ಮೂವರು ಗಂಭೀರ ಗಾಯಗೊಂಡಿದ್ದು, ವೈಷ್ಣವಿ ತಾಯಿ ಕಮಲ ಹರಿಬಾಬು (65) ಹಾಗೂ ಕಾರು ಚಾಲಕ ರಾಕೇಶ್‌ (40) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಇದನ್ನೂ ಓದಿ: ಆಳವಾದ ಕಂದಕಕ್ಕೆ ಬಿದ್ದ ಬಸ್: 8 ಮಂದಿ ದುರ್ಮರಣ

ಡಿವೈಎಸ್‌ಪಿ ವೈಷ್ಣವಿ ಅವರು ತಮ್ಮ ಕುಟುಂಬದೊಂದಿಗೆ ತಮಿಳುನಾಡು ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿ ಕೊಲ್ಲಾಪುರಕ್ಕೆ ವಾಪಾಸು ಬರುತ್ತಿದ್ದ ವೇಳೆ ತಮಟಕಲ್ಲು ಗ್ರಾಮದ ಬ್ರಿಡ್ಜ್‌ ಬಳಿ ಲಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ಅಪಘಾತದ ತೀವ್ರತೆಗೆ  ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು