ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗಾರಾಧನೆಯ ಹೆಸರಾಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025ರ ನವಂಬರ್, ಡಿಸೆಂಬರ್ ತಿಂಗಳಲ್ಲಿ ಒಟ್ಟು ₹14.77ಕೋಟಿ ಆದಾಯ ಬಂದಿದೆ.
ಇದನ್ನೂ ಓದಿ: ಮಂಗಳೂರು: ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾರಿಸಬೇಡಿ: ರಮಾನಾಥ ರೈ

ನವೆಂಬರ್‌ನಲ್ಲಿ ವಿವಿಧ ಸೇವೆಗಳಿಂದ ₹4.56 ಕೋಟಿ, ಹುಂಡಿಯಿಂದ ₹1.09 ಕೋಟಿ ಹಾಗೂ ಅನ್ನದಾನ ನಿಧಿಯಿಂದ ₹83.57 ಲಕ್ಷ ಆದಾಯ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ ₹5.30ಕೋಟಿ, ಹುಂಡಿಯಿಂದ ₹1.90 ಕೋಟಿ, ಅನ್ನದಾನ ನಿಧಿಯಿಂದ ₹1.07 ಕೋಟಿ ಆದಾಯ ಬಂದಿದೆ. ಉಳಿದಂತೆ, ವಸತಿಗೃಹ ಹಾಗೂ ಇತರ ಮೂಲಗಳಿಂದ ಬಂದ ಆದಾಯವೂ ಇದರಲ್ಲಿ ಸೇರಿದೆ ಎಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

