Breaking News

Kundapura : ಅಪರೂಪದ ಮಹಿಷಾಸುರ ಮರ್ಧಿನಿ ವಿಗ್ರಹ ಪತ್ತೆ!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕುಂದಬರಂದಾಡಿ ಗ್ರಾಮದ ಮೇಲ್ಮುಟ್ ಪ್ರದೇಶದಲ್ಲಿರುವ ಜೀರ್ಣೋದ್ಧಾರಗೊಳ್ಳದ ದೇವಾಲಯವೊಂದರಲ್ಲಿ ಅಪರೂಪದ ಹಾಗೂ ವಿಶಿಷ್ಟ ರೂಪದ ಮಹಿಷಾಸುರಮರ್ದಿನಿ ಶಿಲ್ಪ ಪತ್ತೆಯಾಗಿದೆ ಎಂದು ಪುರಾತತ್ವ ತಜ್ಞ ಹಾಗೂ ಆದಿಮಕಲಾ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಪ್ರೊ. ಮುರುಗೇಶಿ ಟಿ. ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದಂತೆ, ತಾಯಿ ದೇವತಾ ಆರಾಧನೆ ಜಗತ್ತಿನ ಅತ್ಯಂತ ಪುರಾತನ ನಂಬಿಕೆ ಪದ್ಧತಿಗಳಲ್ಲಿ ಒಂದಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಪೂರ್ವ ಐತಿಹಾಸಿಕ ಕಾಲಘಟ್ಟಕ್ಕೆ ಸೇರಿ ದೇವತೆಯ ಶಿಲಾಚಿತ್ರಗಳು ಕಂಡುಬರುತ್ತವೆ. ಭಾರತದೆಲ್ಲೆಡೆ ತಾಯಿ ದೇವಿಯನ್ನು ವಿಭಿನ್ನ ರೂಪಗಳಲ್ಲಿ ಪೂಜಿಸಲಾಗುತ್ತಿದ್ದು, ಮಹಿಷಾಸುರಮರ್ದಿನಿ ಆರಾಧನೆ ಕ್ರಿ.ಶ. ಆರಂಭಿಕ ಶತಮಾನಗಳಲ್ಲಿ ಉತ್ತರ ಪಶ್ಚಿಮ ಭಾರತದಲ್ಲಿ ಉದ್ಭವಿಸಿ, ನಂತರ ದಕ್ಷಿಣ ಭಾರತದತ್ತ ವೇಗವಾಗಿ ಹರಡಿತು ಎಂದು ಅವರು ವಿವರಿಸಿದರು.

Advertisement

ಉಡುಪಿ ಜಿಲ್ಲೆ ಮಹಿಷಾಸುರಮರ್ದಿನಿ ಆರಾಧನೆಯ ಪ್ರಮುಖ ಕೇಂದ್ರವಾಗಿದ್ದು, ಜಿಲ್ಲೆಯ ಅತ್ಯಂತ ಹಳೆಯ ಮಹಿಷಾಸುರಮರ್ದಿನಿ ದೇವಸ್ಥಾನ ಬೆಳ್ಮಣದಲ್ಲಿದೆ. ಇದು ಕ್ರಿ.ಶ. 7ನೇ ಶತಮಾನಕ್ಕೆ ಸೇರಿದೆ ಎಂದು ಅಂದಾಜಿಸಲಾಗಿದೆ. ಆಳುವರಸ ದ್ವಿತೀಯನ ಬೆಳ್ಮಣ ತಾಮ್ರಶಾಸನದಲ್ಲಿ ದೇವಿಯನ್ನು ‘ವಿಂಧ್ಯಗಿರಿವಾಸಿನಿ’ ಹಾಗೂ ‘ಮಹಾಮುನಿಸೇವಿತೆ’ ಎಂದು ವರ್ಣಿಸಲಾಗಿದೆ. ಈ ತಾಮ್ರಶಾಸನವೇ ಕನ್ನಡದ ಪ್ರಾಚೀನ ತಾಮ್ರಶಾಸನಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : Dakshina Kannada : ದ.ಕ., ಉಡುಪಿ ಸೇರಿ ರಾಜ್ಯದ 11 ಕಡಲತೀರಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ

ಶಿವನು ಐದನೇ ತತ್ವವಾದ ಪುರುಷ ಶಕ್ತಿಯನ್ನು ಪ್ರತಿನಿಧಿಸುತ್ತಾನೆ ;

ಇದು ಸ್ಥಳೀಯ ದ್ರಾವಿಡ ಕಲಾ ಪರಂಪರೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದ್ದು, ದ್ರಾವಿಡ ಕುಲದ ತಾಯಿ ದೇವತೆಯ ರೂಪವನ್ನು ಹೋಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಬಲಭಾಗದಲ್ಲಿ ಗದೆಯ ಕೆಳಭಾಗದಲ್ಲಿ ಕೆತ್ತಲಾಗಿರುವ ಸಣ್ಣ ಸ್ತ್ರೀ ಮೂರ್ತಿಯನ್ನು ಮಹಿಷಾಸುರನ ಪತ್ನಿಯ ಪ್ರತಿನಿಧಿಯೆಂದು ಗುರುತಿಸಲಾಗಿದೆ.
ಕುಂದಬರಂದಾಡಿಯ ಮಹಿಷಾಸುರಮರ್ದಿನಿ ದೇವಸ್ಥಾನಕ್ಕೆ ವಿಶೇಷ ಐತಿಹಾಸಿಕ ಮಹತ್ವವಿದ್ದು, ಈ ಪ್ರದೇಶದಲ್ಲಿ ನಾಲ್ಕು ದಿಕ್ಕುಗಳಲ್ಲಿ ಮಹಿಷಾಸುರಮರ್ದಿನಿ ದೇವಸ್ಥಾನಗಳಿವೆ ಎಂದು ಅವರು ಹೇಳಿದರು. ದಕ್ಷಿಣ ದಿಕ್ಕಿನಲ್ಲಿ ಇರುವ ಕುಂದಬರಂದಾಡಿ ದೇವಸ್ಥಾನ ದೈತ್ಯ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಈ ದೇವಸ್ಥಾನಗಳ ಗುಂಪು ಪಂಚದುರ್ಗಾ ಪರಂಪರೆಗೆ ಸೇರಿದ್ದು, ಪ್ರಕೃತಿಯ ಐದು ತತ್ವಗಳನ್ನು ಸೂಚಿಸುತ್ತದೆ. ಇದರಲ್ಲಿ ಶಿವನು ಐದನೇ ತತ್ವವಾದ ಪುರುಷ ಶಕ್ತಿಯನ್ನು ಪ್ರತಿನಿಧಿಸುತ್ತಾನೆ. ಶಿಲ್ಪದ ಶೈಲಿಯನ್ನು ಆಧರಿಸಿ ಇದನ್ನು ಕ್ರಿ.ಶ. 15ನೇ ಶತಮಾನಕ್ಕೆ ಸೇರಿದದ್ದೆಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು. ಈ ಅಧ್ಯಯನಕ್ಕೆ ಸಹಕಾರ ನೀಡಿದ ದೇವಾಲಯ ಜೀರ್ಣೋದ್ಧಾರ ಸಮಿತಿಯ ನಾಗೇಂದ್ರ ಪೂಜಾರಿ, ರಘುರಾಮ ಪೂಜಾರಿ, ಸೀತಾರಾಮ ಪೂಜಾರಿ ಹಾಗೂ ಸಂಜೀವ ಬಿಲ್ಲವ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಆದಿಮಕಲಾ ಸಂಶೋಧನಾ ತಂಡದ ಮುರುಳಿಧರ ಹೆಗಡೆ, ಶ್ರೇಯಸ್, ಗೌತಮ್ ಮತ್ತು ಭಾನುಮತಿ ಅವರ ಶ್ರಮವನ್ನು ಅವರು ಶ್ಲಾಘಿಸಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು