ಬಂಟ್ವಾಳ: ಯಕ್ಷಗಾನದ ಖ್ಯಾತ ಮಹಿಳಾ ಭಾಗವತರಾದ ಕಾವ್ಯಶ್ರೀ ಆಜೇರು ಅವರಿಗೆ ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದಿಂದ ಕೊಡಮಾಪಲ್ಪಡುವ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯಶ್ರೀ ಆಜೇರು, ಉಮೇಶ್ ಮಿಜಾರ್‌ಗೆ ಕಲಾಭೂಷಣ ಪ್ರಶಸ್ತಿ ರ ಸಮ್ಮಾನ್ ಪ್ರಶಸ್ತಿ ಒಲಿದುಬಂದಿದೆ.
ಶ್ರೀ ಕುಂದೇಶ್ವರ ದೇಗುಲದ ಧರ್ಮದರ್ಶಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ, ಅರ್ಥಧಾರಿಯೂ ಆಗಿದ್ದ ದಿ. ರಾಘವೇಂದ್ರ ಭಟ್ ಸ್ಮರಣಾರ್ಥ ಕ್ಷೇತ್ರದ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜ.೨೩ ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಆಯ್ಕೆ ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆಜೇರಿನಲ್ಲಿರುವ ಯಕ್ಷಗಾನದ ಮದ್ದಲೆ ವಾದಕ ಶ್ರೀಪತಿ ನಾಯಕ್ ಮತ್ತು ಉಮಾ ದಂಪತಿಯ ಪುತ್ರಿಯಾಗಿರುವ ಕಾವ್ಯಶ್ರೀ ಆಜೇರು, ಯಕ್ಷಗಾನದಲ್ಲಿ ಹವ್ಯಾಸಿ ಕಲಾವಧಿಯಾಗಿದ್ದು, ಕಟೀಲು ಮೇಳ, ಬಪ್ಪನಾಡು ಮೇಳ, ಹೊಸನಗರ ಮೇಳ ಸೇರಿದಂತೆ ಅನೇಕ ಮೇಳಗಳಲ್ಲಿ ಅತಿಥಿ ಭಾಗವತರಾಗಿ ಪ್ರದರ್ಶನಗಳನ್ನು ನೀಡಿದ್ದಾರೆ. ಅಲ್ಲದೆ, ಮುಂಬೈ, ಪುಣೆ, ದೆಹಲಿ, ಹೈದರಾಬಾದ್ ಸೇರಿದಂತೆ ಅನೇಕ ಕಡೆಗಳಲ್ಲಿ ಯಕ್ಷಗಾನ ಪ್ರೇಮಿಗಳಿಗೆ ಭಾಗವತಿಕೆಯ ಸಾರವನ್ನು ಉಣಬಡಿಸಿದ್ದಾರೆ.
ಇದನ್ನೂ ಓದಿ: Mumbai: ನಾಲ್ಕು ವರ್ಷದ ನಂತರ ಅಗ್ರಸ್ಥಾನಕ್ಕೆ ಏರಿದ ವಿರಾಟ್ ಕೊಹ್ಲಿ
ಮಂಗಳೂರು ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆಯಾಗಿದ್ದು, ದೂರದರ್ಶನ, ಚಂದನ ವಾಹನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತೆಂಕು ತಿಟ್ಟು ಹಾಗೂ ಬಡಗು ತಿಟ್ಟು ಎರಡೂ ಶೈಲಿಗಳ ಪ್ರಸಿದ್ಧ ಭಾಗವತರೊಂದಿಗೆ ಜುಗಲ್ಬಂದಿ ನಡೆಸಿದ ಕೀರ್ತಿ ಇವರದ್ದಾಗಿದೆ.
ಉಮೇಶ್ ಮಿಜಾರ್‌ಗೆ ಒಲಿದ ಕಲಾಭೂಷಣ
ತುಳು ಸಿನಿಮಾ, ನಾಟಕ ರಂಗಗಳಲ್ಲಿ ಜನರನ್ನು ರಂಜಿಸುತ್ತಿರುವ ಖ್ಯಾತ ಹಾಸ್ಯ ನಟ ಉಮೇಶ್ ಮಿಜಾರ್ ಅವರಿಗೆ ಕಲಾಭೂಷಣ ಪ್ರಶಸ್ತಿ ಒಲಿದು ಬಂದಿದೆ. ಮಂಗಳೂರಿನ ಮಿಜಾರಿನ ಉಮೇಶ್ ಅವರು, ಸಣ್ಣ ವಯಸ್ಸಿನಲ್ಲೇ ಮುಂಬೈಗೆ ತೆರಳಿ ಹೊಟೇಲ್ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಬಳಿಕ ರಂಗಭೂಮಿಯತ್ತ ಆಕರ್ಷಿತರಾದ ಇವರು, ಮಹಿಳಾ ಪಾತ್ರದ ಮೂಲಕ ಮೊದಲ ಬಾರಿಗೆ ರಂಗಪ್ರವೇಶ ಮಾಡಿದರು.
ಹೀಗೆ ರಂಗ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಉಮೇಶ್ ಅವರು ನಾಟಕ ರಚನೆ, ಹಾಸ್ಯ ನಟನೆಯಲ್ಲಿ ಸೈ ಎನಿಸಿಕೊಂಡರು. ಒಟ್ಟು 80 ತುಳು ಸಿನಿಮಾಗಳಲ್ಲಿ ಜನರನ್ನು ರಂಜಿಸಿರುವ ಉಮೇಶ್, 6 ಕನ್ನಡ ಸಿನಿಮಾ ಹಾಗೂ 6 ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

