ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಪದ್ಮ ವಿಭೂಷಣ ಪುರಸ್ಕೃತೆ ಆಶಾ ಬೋಸ್ಲೆ ಅವರು ಭಾನುವಾರ ಮಧ್ಯಾಹ್ನ 92ನೇ ವಯಸ್ಸಿನಲ್ಲಿ ನಿಧನರಾದರು.
ಹಲವು ದಶಕಗಳ ಕಾಲ ಭಾರತೀಯ ಸಿನಿಮಾ ಸಂಗೀತಕ್ಕೆ ತನ್ನ ಅದ್ಭುತ ಧ್ವನಿಯಿಂದ ಜೀವ ತುಂಬಿದ ಈ ಮಹಾನ್ ಕಲಾವಿದೆ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆನಲ್ಲಿ ಆರೋಗ್ಯ ಸಮಸ್ಯೆಗಳ ಹಿನ್ನೆಲೆ ಕೊನೆಯುಸಿರೆಳೆದರು.

ಶನಿವಾರ ಸಂಜೆ ಹೃದಯಾಘಾತ ಮತ್ತು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾದರು ಎಂದು ಆಸ್ಪತ್ರೆ ಅಧಿಕಾರಿಗಳು ಮತ್ತು ಕುಟುಂಬದವರು ದೃಢಪಡಿಸಿದ್ದಾರೆ.
ಸಂಗೀತದ ಮಹಾಯಾತ್ರೆ

1933ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಂಗ್ಲಿಯಲ್ಲಿ ಜನಿಸಿದ ಆಶಾ ಭೋಸ್ಲೆ, ಪ್ರಸಿದ್ಧ ಶಾಸ್ತ್ರೀಯ ಗಾಯಕ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರ ಪುತ್ರಿಯಾಗಿದ್ದಾರೆ. ತಮ್ಮ ಸಹೋದರಿ ಲತಾ ಮಂಗೇಶ್ಕರ್ ಅವರೊಂದಿಗೆ ಬಾಲ್ಯದಲ್ಲೇ ಸಂಗೀತ ಕ್ಷೇತ್ರಕ್ಕೆ ಪ್ರವೇಶಿಸಿದರು.
1943ರಲ್ಲಿ ‘ಮಾಜಾ ಬಾಲ’ ಮರಾಠಿ ಚಿತ್ರಕ್ಕೆ ಮೊದಲ ಹಾಡು ಹಾಡುವ ಮೂಲಕ ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಅವರು, ನಂತರ ಹಿಂದಿ ಸಿನೆಮಾದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವುದು ಅವರ ವಿಶಿಷ್ಟ ಸಾಧನೆ.

ಇದನ್ನೂ ಓದಿ: ಮೊನಾಲಿಸಾ ಮದುವೆ ವಿವಾದಕ್ಕೆ ಬಿಗ್ ಟ್ವಿಸ್ಟ್: ಗಂಡ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್ ದಾಖಲು!
ಬಹುಮುಖ ಪ್ರತಿಭೆ
ಆಶಾ ಭೋಸ್ಲೆ ಅವರು ಯಾವ ಶೈಲಿಯನ್ನಾದರೂ ಸುಲಭವಾಗಿ ಅಳವಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದರು.
1981ರ Umroa Jaan ಚಿತ್ರದ ಗಝಲ್‌ಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಅವರು, ‘Piya Tu Ab Toh Aaja’ ಮತ್ತು ‘Yeh Mera Dil’ಂತಹ ಕ್ಯಾಬರೆ ಹಾಡುಗಳ ಮೂಲಕವೂ ಅಪಾರ ಜನಪ್ರಿಯತೆ ಗಳಿಸಿದರು.
ಸಂಗೀತ ನಿರ್ದೇಶಕರಾದ ಒಪಿ ನಯ್ಯಾರ್ ಮತ್ತು ಆರ್.ಡಿ ಬರ್ಮನ್ ಅವರೊಂದಿಗೆ ಅವರ ಸಂಗೀತ ಸಹಕಾರ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ತಂದಿತು. 1990ರ ದಶಕದಲ್ಲಿ ಎ ಆರ್ ರಹ್ಮಾನ್ ಜೊತೆ ‘ರಂಗೀಲ’ ಚಿತ್ರದ ಹಾಡುಗಳ ಮೂಲಕ ಹೊಸ ತಲೆಮಾರಿನಲ್ಲೂ ತಮ್ಮ ಪ್ರಭಾವ ಮುಂದುವರಿಸಿದರು.
ಪ್ರಶಸ್ತಿಗಳು
2000ರಲ್ಲಿ ಭಾರತ ಸರ್ಕಾರದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಪಡೆದರು.
ಅಂತಿಮ ವಿದಾಯ
ಆಶಾ ಬೋಸ್ಲೆ ಅವರ ಅಂತ್ಯಕ್ರಿಯೆ ಸೋಮವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. “ಇಂಡಿಪಾಪ್ ರಾಣಿ” ಎಂದೇ ಗುರುತಿಸಲ್ಪಟ್ಟ ಆಶಾ ಭೋಸ್ಲೆ ಅವರ ನಿಧನದಿಂದ ಭಾರತೀಯ ಸಂಗೀತ ಲೋಕವು ಕಂಬನಿ ಮಿಡಿದಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

