Breaking News

‘ಲವ್ ಮಾಕ್ಟೇಲ್ 3’ ಟ್ರೈಲರ್ ಬಿಡುಗಡೆ: ಇದು ನನ್ನ ಕೊನೆಯ ಅಧ್ಯಾಯ

ಇಂದು (ಮಾರ್ಚ್ 7, 2026) ಬಿಡುಗಡೆಯಾದ ಟ್ರೈಲರ್ ‘ಲವ್ ಮಾಕ್ಟೇಲ್’ ಸರಣಿಯ ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾ, ಆದಿ (ಡಾರ್ಲಿಂಗ್ ಕೃಷ್ಣ) ಮತ್ತು ಆತನ ದತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ.

ಮೊದಲು ಏಪ್ರಿಲ್ 10 ರಂದು ನಿಗದಿಯಾಗಿದ್ದ ಸಿನಿಮಾ, ಈಗ ಮಾರ್ಚ್ 19, 2026 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದೂಡಲ್ಪಟ್ಟ ಕಾರಣ, ಆ ಲಕ್ಕಿ ಸ್ಲಾಟ್ ಈಗ ‘ಲವ್ ಮಾಕ್ಟೇಲ್ 3’ ಪಾಲಾಗಿದೆ. ಯುಗಾದಿ ಮತ್ತು ರಂಜಾನ್ ಸಾಲು ಸಾಲು ರಜೆಗಳ ಲಾಭ ಪಡೆಯಲು ಚಿತ್ರತಂಡ ಈ ನಿರ್ಧಾರ ಮಾಡಿದೆ.

Advertisement

ಇಲ್ಲಿದೆ ನೋಡಿ ಟ್ರೈಲರ್:

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ್ತಾ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಅಂತಿಮ ಭಾಗದಲ್ಲಿದೆ.ನಕುಲ್ ಅಭಯಂಕರ್ ಅವರ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಅವರ ಛಾಯಾಗ್ರಹಣ ಸಿನೆಮಾದ ಪ್ರಮುಖ ಆಕರ್ಷಣೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು