ಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು

madgaon-to-bengaluru-special-train-ugadi-ramzan-swr-coastal-route-udupi-mangaluru-timings-kannada

ಮಂಗಳೂರು: ಯುಗಾದಿ ಮತ್ತು ರಮ್ಜಾನ್ ಹಬ್ಬದ ಹಿನ್ನೆಲೆ ಊರಿಗೆ ತೆರಳಿದ್ದ ಪ್ರಯಾಣಿಕರ ಸುಗಮ ವಾಪಸಿಗಾಗಿ ದಕ್ಷಿಣ ಪಶ್ಚಿಮ ರೈಲ್ವೆ (SWR) ವಿಶೇಷ ರೈಲು ಸೇವೆಯನ್ನು ಘೋಷಿಸಿದೆ.

ಮಡಗಾಂವ್‌ನಿಂದ ಬೆಂಗಳೂರಿಗೆ ಸಂಚರಿಸುವ ಈ ವಿಶೇಷ ರೈಲು ಕಾರವಾರ, ಉಡುಪಿ ಮತ್ತು ಮಂಗಳೂರು ಮಾರ್ಗವಾಗಿ ಪ್ರಯಾಣಿಸಲಿದೆ. ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

ಮಾರ್ಚ್ 22ರಂದು ಈ ವಿಶೇಷ ರೈಲು ಮಡಗಾಂವ್‌ನಿಂದ ಬೆಳಗ್ಗೆ 11:00ಕ್ಕೆ ಹೊರಡಲಿದೆ. ಬಳಿಕ ಕಾರವಾರ (11:28), ಗೋಕರ್ಣ (12:30), ಮುರುಡೇಶ್ವರ (1:40), ಬೈಂದೂರು (2:12), ಕುಂದಾಪುರ (2:40), ಬಾರ್ಕೂರು (2:55), ಉಡುಪಿ (3:30), ಮುಲ್ಕಿ (3:58), ಸುರತ್ಕಲ್ (4:14), ಬಂಟ್ವಾಳ (6:00), ಕಬಕ ಪುತ್ತೂರು (6:28) ಹಾಗೂ ಸುಬ್ರಹ್ಮಣ್ಯ ರಸ್ತೆಯ ಮೂಲಕ (7:50) ಸಂಚರಿಸಿ ಮುಂದಿನ ದಿನ ಬೆಳಗ್ಗೆ 5:00ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ.. ಕರ್ನಾಟಕದಲ್ಲಿ 4 ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಬದಲಾವಣೆ

ಹಬ್ಬದ ಬಳಿಕ ಕೆಲಸಕ್ಕೆ ಹಿಂತಿರುಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವ ಹಿನ್ನೆಲೆ ಈ ಸೇವೆಯನ್ನು ಆರಂಭಿಸಲಾಗಿದೆ. ಹಿಂದಿನ ವಿಶೇಷ ರೈಲು ಸೇವೆಗೆ ಭಾರೀ ಸ್ಪಂದನೆ ದೊರೆತಿದ್ದು, ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

ಇದೇ ವೇಳೆ ಸ್ಥಳೀಯ ಪ್ರಯಾಣಿಕರಿಗಾಗಿ ತುಮಕೂರು–ಬಾಣಸವಾಡಿ ಮಾರ್ಗದಲ್ಲಿ ಯಶವಂತಪುರ ಮೂಲಕ ವಿಶೇಷ MEMU ರೈಲು ಸೇವೆಯನ್ನೂ ಮಾರ್ಚ್ 22ರಂದು ಒದಗಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು