Breaking News

ಭಾರತದ ಮಾರುಕಟ್ಟೆಗೆ ಹೊಸ ಆಟೋ ಬಿಡುಗಡೆ ಮಾಡಿದ ಮಹೀಂದ್ರ, ಇದರಲ್ಲಿದೆ ಅದ್ಬುತ ಫೀಚರ್!

ಅಟೋಮೊಬೈಲ್ ದೈತ್ಯ ಮಹೀಂದ್ರ ಕಂಪನಿಯು ದೇಶದಾದ್ಯಂತ ಅನೇಕ ಹೊಸ ವೈಶಿಷ್ಟ್ಯಗಳನ್ನೊಳಗೊಂಡ ಹೊಸ ಇ-ಆಟೋ ರಿಕ್ಷಾವನ್ನು ಫೆ. 12 ರಂದು ಬಿಡುಗಡೆ ಮಾಡಿದೆ. 200 ಕಿ.ಮೀ ಮೈಲೇಜ್ ನೀಡುವ ಈ ಅಟೋ ರಿಕ್ಷಾ, ರೇಂಜ್ ಮೋಡ್‌ನಲ್ಲಿ 40 ಕಿ.ಮೀ, ರೈಡ್ ಮೋಡ್‌ನಲ್ಲಿ 45 ಹಾಗೂ ರೇಸ್ ಮೋಡ್‌ನಲ್ಲಿ 55 ಕಿ.ಮೀ. ವೇಗದಲ್ಲಿ ರೈಡ್ ಮಾಡಬಹುದಾಗಿದೆ. ರೀ ಜನರೇಟಿವ್ ಬ್ರೇಕಿಂಗ್ ವ್ಯವಸ್ಥೆ ಇದ್ದು, ಇದರಲ್ಲಿ ಆಟೋ ಸ್ಲೋ ಆದಾಗ, ಬ್ರೇಕ್ ಹೊಡೆದಾಗ ಮತ್ತು ರಿವರ್ಸ್ ತೆಗೆಯುವಾಗಲೂ ಬ್ಯಾಟರಿ ಚಾರ್ಜ್ ಆಗುವುದು ವಿಶೇಷವಾಗಿದೆ.

ವಾರಂಟಿ ಬಗ್ಗೆ ನೋಡುವುದಾದರೆ, ಒಂದೂವರೆ ಲಕ್ಷ ಕಿ.ಮೀ. ಅಥವಾ ಆರು ವರ್ಷ, ಯಾವುದು ಮೊದಲೋ ಅದು. ಅಲ್ಲದೆ, ಒಂದು ಲಕ್ಷ ಕಿ.ಮೀ. ವರೆಗೆ ಅಥವಾ ನಾಲ್ಕು ವರ್ಷದ ವರೆಗೆ ಉಚಿತ ಸರ್ವೀಸ್ ಇರಲಿದೆ.

Advertisement

ಹೊಸ ವಿಶೇಷತೆ

ಯಾವುದರಲ್ಲಿಯೂ ಇಲ್ಲದ ಫೀಚರ್ಸ್ ಅನ್ನು ಈ ಹೊಸ ಇ-ಆಟೋದಲ್ಲಿ ಅಳವಡಿಸಲಾಗಿದೆ. ಅದೇನೆಂದರೆ, ಎಕ್ಸಲೇಟರ್ ಅನ್ನು ರಿವರ್ಸ್ ತಿರುಗಿಸಿದಾಗ ಬ್ಯಾಟರಿ ಚಾರ್ಜ್ ಆಗುವಂತಹ ವಿಶೇಷ ಫೀಚರ್ ಅಳವಡಿಸಲಾಗಿದೆ.
ಅಲ್ಲದೆ, ಕ್ರೀಪ್ ಫಂಕ್ಷನ್ ವ್ಯವಸ್ಥೆ ಅಳವಡಿಸಲಾಗಿದ್ದು, ಚಾಲಕನು ಆಟೋದಲ್ಲಿ ಕುಳಿತಾಗ ಎಕ್ಸಲೇಟರ್ ನೀಡದಿದ್ದರೂ 5 ಕಿ.ಮೀ ವೇಗದಲ್ಲಿ ಚಲಿಸಬಹುದಾಗಿದೆ. ಟ್ರಾಫಿಕ್ ಏರಿಯಾಗಳಲ್ಲಿ ಇದು ಸಹಕಾರಿಯಾಗಲಿದೆ. ಆಟೋದ ವೀಲ್ ಬೇಸ್ 2,100 ಇದ್ದು, ಗ್ರೌಂಡ್ ಕ್ಲಿಯರೆನ್ಸ್ 200 ಎಂಎಂ ಇದೆ.

ಇದನ್ನೂ ಓದಿ: ಮಹೀಂದ್ರ XUV 7XO, ಎಲೆಕ್ಟ್ರಿಕ್ XEV 9S ಬಿಡುಗಡೆ, ಬೆಲೆ, ಫೀಚರ್ಸ್‌ ಹೀಗಿದೆ

0 ದಿಂದ 100 ಪರ್ಸೆಂಟ್ ಬ್ಯಾಟರಿ ಚಾರ್ಜ್ ಆಗಲು 5:15 ಗಂಟೆ ತಗುಲಲಿದ್ದು, 0-80 ಪರ್ಸೆಂಟ್ ಚಾರ್ಜ್ ಆಗಲು 3:50 ಗಂಟೆ ತಗಲುತ್ತದೆ. ಬ್ಯಾಟರಿ ಚಾರ್ಜರ್‌ಗೆ ಮೂರು ವರ್ಷ ವಾರಂಟಿ ಇದ್ದು, 11.7 ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿದೆ. ಪೀಕ್ ಪವರ್ 10 ಕಿ.ಲೋ ವ್ಯಾಟ್ ಇದ್ದು, ಟಾರ್ಕ್ 56 ಎಂಎಂ ಇದೆ. ಡ್ಯುವೆಲ್ ಫೋರ್ಕ್ ಸಸ್ಪೆನ್ಶನ್ ಇನ್ ಫ್ರಂಟ್, ಬ್ಯಾಕ್ ಇಂಡಿಪೆಂಡೆಂಟ್ ರೇರ್ ಸಸ್ಪೆನ್ಶನ್ ಅಳವಡಿಸಲಾಗಿದೆ.

ಫೋನ್ ಹೋಲ್ಡರ್, ಚಾರ್ಜಿಂಗ್ ಪೋರ್ಟ್, ಗ್ಲೋ ಬಾಕ್ಸ್, ಬಾಟಲ್ ಹೋಲ್ಡರ್ ಇತ್ಯಾದಿ ಎಕ್ಸಸರಿಸ್‌ಗಳಿದ್ದು, ಇ-ಅಟೋ ಎಕ್ಸ್ ಶೋರೂಮ್ ಬೆಲೆ 3,58,999 ರೂ. ಆಗಿದೆ.

ಮತ್ತಷ್ಟು ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು