ಮಂಗಳೂರು : ಸಾಮಾಜಿಕಜಾಲತಣಗಳಲ್ಲಿ ಸದಾ ಆಕ್ಟಿವ್ ಆಗಿರಿವ ನೆಟ್ಟಿಗರು ಒಂದಷ್ಟು ರೀಲ್ಸ್ ಸ್ಟಾರ್ ಗಳ ಅಭಿಮಾನಿಗಳಾಗುತ್ತಾರೆ. ಮತ್ತೆ ಅವರ ವೀಡಿಯೋ ಅಥವಾ ಹೊಸ ಪೋಸ್ಟ್ ಗಾಗಿ ಕಾಯುತ್ತಿರುತ್ತಾರೆ. ಹೌದು… ಇದೇ ರೀತಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಹಾಸ್ಯಮಯವಾಗಿ ಬೈಯುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಕರಾವಳಿಯ ಸೋಶಿಯಲ್ ಮೀಡಿಯಾದ ಆಶಾ ಪಂಡಿತ್ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ತಮ್ಮನ್ನು ತಾವು ರಂಗಭೂಮಿ ಕಲಾವಿದೆ ಎಂದು ಹೇಳಿಕೊಂಡಿದ್ದ ಅವರು ಬಿಡುವಿನ ವೇಳೆಯಲ್ಲಿ ಹಾಸ್ಯಮಯವಾಗಿ ರೀಲ್ಸ್ ಮಾಡುತ್ತಿದ್ದರು. ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರಲ್ಲದೇ, ಅವರ ಆಕಸ್ಮಿಕ ಸಾವು ಸಾಕಷ್ಟು ಅಭಿಮಾನಿಗಳಿಗೆ ಆಘಾತ ನೀಡಿದೆ.

ಇತ್ತೀಚೆಗೆ, ಸೋಷಿಯಲ್ ಮೀಡಿಯಾದಲ್ಲಿ ಆಶಾ ಪಂಡಿತ್ ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿದ್ದರು. ಅವರ ಮುಜು ಮುಸುಂಟ್, ಮರುವಾಯಿ ಮುಸುಂಟ್, ತೇಡೆ ಮುಸುಂಟ್ ಈ ರೀತಿಯ ಡೈಲಾಗ್ ಗಳನ್ನು ಕೇಳೋದೇ ಒಂಥರಾ ಖುಷಿ ಕೊಡುತ್ತಿತ್ತು. ಅಲ್ಲದೇ ಎಲ್ಲರಿಗೂ ಆಶಾಕ್ಕ ಅಂತಲೇ ಪರಿಚಿತರಾಗಿದ್ದರು.
ಮಂಗಳೂರಿನ ಪಡೀಲ್ ನಲ್ಲಿ ಪುಟ್ಟ ಕ್ಯಾಂಟೀನ್ ಇರಿಸಿಕೊಂಡು ಜೀವನ ಮಾಡುತ್ತಿದ್ದ ಇವರು ರಂಗಭೂಮಿ ಕಲಾವಿದೆ. ಒಳ್ಳೆಯ ಹಾಡುಗಾರ್ತಿ ಕೂಡ.
ಇದನ್ನೂ ಓದಿ : Leopard : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ: ಶಾಲಾ ಮಕ್ಕಳಿಗೆ ಕಟ್ಟೆಚ್ಚರ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

