ಎಂ.ಫಾರ್ಮ್ ಪರೀಕ್ಷೆಯಲ್ಲಿ ಪುತ್ತೂರಿನ ಸ್ವಸ್ತಿಕಾರಿಗೆ ಪ್ರಥಮ ರ್ಯಾಂಕ್

mangaluru-srinivas-college-swastika-first-rank-mpharm-rguhs-kannada

ಪುತ್ತೂರು: ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು. ಸ್ವಸ್ತಿಕಾ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (RGUHS) ನಡೆಸಿದ ಎಂ. ಫಾರ್ಮ್ (ಇಂಡಸ್ಟ್ರಿಯಲ್ ಫಾರ್ಮಸಿ) ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಸ್ವಸ್ತಿಕ ಅವರು ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಸೈಂಟ್ ಬ್ರಿಜಿಡ್ ಸ್ಕೂಲ್, ಕೆ.ವಿ.ಜಿ ಆಂಗ್ಲ ಮಾಧ್ಯಮ ಶಾಲೆ ಸುಳ್ಯ ಹಾಗೂ ಎನ್‌ಎಂಪಿಯುಸಿ ಅರಂತೋಡು ಸಂಸ್ಥೆಗಳ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. ಅರಂತೋಡು ಎನ್‌ಎಂಪಿಯುಸಿ ಉಪನ್ಯಾಸಕ ಸುರೇಶ್ ವಾಗ್ಲೆ ಹಾಗೂ ಬೆಳ್ಳಾರೆ ಕೆಪಿಎಸ್ ಪ್ರೌಢಶಾಲೆಯ ಶಿಕ್ಷಕಿ ಸಂಧ್ಯಾಕುಮಾರಿ ಬಿ.ಎಸ್. ದಂಪತಿಗಳ ಪುತ್ರಿಯಾಗಿರುವ ಇವರು ಮಂಡಕೋಲು ಗ್ರಾಮದ ಬೊಳುಗಲ್ಲು ಶ್ರೀಧರ ನಾಯಕ್ ಮತ್ತು ಜಯಶ್ರೀ ದಂಪತಿ ಮೊಮ್ಮಗಳಾಗಿದ್ದಾರೆ.

Advertisement

ಇದನ್ನೂ ಓದಿ: ಪಾರ್ಶ್ವವಾಯು ಪೀಡಿತ ಜಿನ್ನಪ್ಪ ನಾಯ್ಕರಿಗೆ ಅರುಣ ಸಾರಥಿ ಚಾಲಕರ ಸಂಘಟನೆಯಿಂದ ನೆರವು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು