ನವದೆಹಲಿ : ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಭಾರತೀಯ ನಟಿ ದೀಪಿಕಾ ಪಡುಕೋಣೆ, ಕಳೆದ ಎರಡು ದಶಕಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಯಶಸ್ವಿ ನಟಿಯರಲ್ಲೊಬ್ಬರಾಗಿದ್ದಾರೆ. 1986ರ ಜನವರಿ 5ರಂದು ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ ಜನಿಸಿದ ದೀಪಿಕಾ, ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿ.
ಆರಂಭದಲ್ಲಿ ಕ್ರೀಡಾಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕೆಂಬ ಆಸೆ ಹೊಂದಿದ್ದ ಅವರು, ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ಬಳಿಕ ಅಭಿನಯದತ್ತ ಮುಖ ಮಾಡಿದರು. 2006ರಲ್ಲಿ ಕನ್ನಡ ಚಿತ್ರ ‘ಐಶ್ವರ್ಯ’ ಮೂಲಕ ದೀಪಿಕಾ ಅಭಿನಯ ಜೀವನ ಆರಂಭಿಸಿದರು. 2007ರಲ್ಲಿ ಫರಾ ಖಾನ್ ನಿರ್ದೇಶನದ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಶಾರುಖ್ ಖಾನ್ ಅವರೊಂದಿಗೆ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾದ ಈ ಸಿನಿಮಾ, ದೀಪಿಕಾಗೆ ಫಿಲ್ಮ್ಫೇರ್ ಅತ್ಯುತ್ತಮ ನವ ನಟಿ ಪ್ರಶಸ್ತಿ ತಂದುಕೊಟ್ಟಿತು. ನಂತರ ‘ಗೋಲಿಯೋನ್ ಕಿ ರಾಸಲೀಲಾ: ರಾಮ್-ಲೀಲಾ’ (2014) ಹಾಗೂ ‘ಪಿಕು’ (2016) ಚಿತ್ರಗಳಿಗೆ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು.

ಇದನ್ನೂ ಓದಿ : ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ನಾಲ್ಕನೇ ವಾರದಲ್ಲೂ ಶತಕ : ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ದಾಖಲೆ
ಈಗ ಅವರ ವೃತ್ತಿಜೀವನದ ಪ್ರಮುಖ ಸಾಧನೆಗಳತ್ತ ಒಂದು ನೋಟ:
ಒಂದೇ ವರ್ಷದಲ್ಲಿ ರೂ.100 ಕೋಟಿ ಚಿತ್ರಗಳು, ಕಾಲಕ್ರಮೇಣ ದೀಪಿಕಾ ವೈವಿಧ್ಯಮಯ ಚಿತ್ರಗಳ ಮೂಲಕ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡರು. ‘ಲವ್ ಆಜ್ ಕಲ್’ (2009), ‘ಕಾಕ್ಟೇಲ್’ (2012), ‘ಯೇ ಜವಾನಿ ಹೈ ದಿವಾನಿ’ (2013), ‘ಚೆನ್ನೈ ಎಕ್ಸ್ಪ್ರೆಸ್’ (2013) ಹಾಗೂ ‘ಹ್ಯಾಪಿ ನ್ಯೂ ಇಯರ್’ (2014) ಮುಂತಾದ ಚಿತ್ರಗಳು ವಾಣಿಜ್ಯವಾಗಿ ಭರ್ಜರಿ ಯಶಸ್ಸು ಕಂಡವು. ಸಿನಿಮಾಗಳ ಹೊರತಾಗಿ, ಜಾಗತಿಕ ಫ್ಯಾಷನ್ ಮತ್ತು ಬ್ರ್ಯಾಂಡಿಂಗ್ ಕ್ಷೇತ್ರದಲ್ಲಿಯೂ ದೀಪಿಕಾ ಬಲವಾದ ಹಾಜರಾತಿ ನಿರ್ಮಿಸಿದ್ದಾರೆ. ಅಲ್ಲದೇ, ತೆರೆಯ ಮೇಲೆ ಮತ್ತು ಹೊರಗೂ ಪವರ್ ಕಪಲ್ ಅಂದ್ರೆ, ವೈಯಕ್ತಿಕ ಬದುಕಿನಲ್ಲಿ, ನಟಿ ದೀಪಿಕಾ ನಟ ರಣವೀರ್ ಸಿಂಗ್ ಅವರನ್ನು ನವೆಂಬರ್ 2018ರಲ್ಲಿ ವಿವಾಹವಾಗಿದ್ದಾರೆ. ಹಲವು ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿರುವ ಈ ಜೋಡಿ, ಭಾರತೀಯ ಚಿತ್ರರಂಗದ ಪ್ರಮುಖ ಪವರ್ ಕಪಲ್ ಆಗಿ ಗುರುತಿಸಿಕೊಂಡಿದ್ದು, ಇಬ್ಬರಿಗೂ ಸೇರಿ ಇನ್ಸ್ಟಾಗ್ರಾಂನಲ್ಲಿ 128.1 ಮಿಲಿಯನ್ ಅನುಯಾಯಿಗಳಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

