ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಸಾಂಜೋ ಸುನಿಲ್ (31) ಎಂಬ ಯುವಕ ಡಬ್ಲಿನ್‌ನಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್ ಉಪನಗರದ ಚಾರ್ಲ್ಸ್‌ಟೌನ್ ಪ್ರದೇಶದ ನಿವಾಸದಲ್ಲಿ ಈ ಘಟನೆ ಸಂಭವಿಸಿದೆ. ಸಾಂಜೋ ಸುನಿಲ್ ಅವರು ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಐರ್ಲೆಂಡ್‌ಗೆ ತೆರಳಿದ್ದರು. ಅವರ ಪತ್ನಿ ಐರ್ಲೆಂಡ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಸಾಂಜೋ ಅವರು ಅವರನ್ನು ಸೇರಿಕೊಂಡಿದ್ದರು. ಪತ್ನಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸಾಂಜೋ ಸುನಿಲ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಐರಿಶ್ ಪೊಲೀಸರು (An Garda Síochána) ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಾಂಜೋ ಅವರು ಈ ಹಿಂದೆ ಇಸ್ರೇಲ್‌ನಲ್ಲಿಯೂ ಕೆಲಸ ಮಾಡಿದ್ದರು. ವಿವಾಹವಾಗಿ ಒಂದು ವರ್ಷ ತುಂಬಿದ್ದ ಇವರ ಸಾವು ಕುಟುಂಬಸ್ಥರಲ್ಲಿ ಭಾರಿ ಆಘಾತ ಮೂಡಿಸಿದೆ.

ಇದನ್ನೂ ಓದಿ: Shocking: ತಾಲಿಬಾನ್ ಹೊಸ ರೂಲ್ಸ್, ಹೆಣ್ಮಕ್ಕಳಿಗೆ ನರಕ
ಕಳೆದ ವಾರವಷ್ಟೇ ಕೆನಡಾದಲ್ಲಿ ಕನ್ನಡಿಗ ಸಾಫ್ಟ್‌ವೇರ್ ಎಂಜಿನಿಯರ್ ಚಂದನ್ ಕುಮಾರ್ ಅವರ ಹತ್ಯೆ ನಡೆದಿತ್ತು. ಈಗ ಐರ್ಲೆಂಡ್‌ನಲ್ಲಿ ಮತ್ತೋರ್ವ ಕನ್ನಡಿಗನ ಸಾವಿನ ಸುದ್ದಿ ಬಂದಿರುವುದು ವಿದೇಶದಲ್ಲಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

