ಬೆಂಗಳೂರು: ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ತೀವ್ರ ಕಳವಳಕಾರಿ ಘಟನೆಯೊಂದು ವರದಿಯಾಗಿದೆ. ಅಕ್ಟೋಬರ್ 27ರ ಮಂಗಳವಾರ ಸಂಜೆ ವೈಟ್‌ಫೀಲ್ಡ್ – ಕಾಡುಗೋಡಿ ಮಾರ್ಗದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಸೌಪಿಕಾ (Sowpika) ಎಂಬ ಯುವತಿಯನ್ನು ಆಕೆಯ ಅನುಮತಿಯಿಲ್ಲದೆ ಸಹಪ್ರಯಾಣಿಕನೊಬ್ಬ ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿರುವ ಸೌಪಿಕಾ, ಘಟನೆಯ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅಕ್ಟೋಬರ್ 27ರ ಸಂಜೆ ಸುಮಾರು 4:30ರ ಸುಮಾರಿಗೆ ವೈಟ್‌ಫೀಲ್ಡ್ ಸಮೀಪ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ, ವ್ಯಕ್ತಿಯೊಬ್ಬ ತಮ್ಮನ್ನು ಸೀಕ್ರೆಟ್ ಆಗಿ ವಿಡಿಯೋ ಮಾಡುತ್ತಿರುವುದನ್ನು ಸೌಪಿಕಾ ಗಮನಿಸಿದ್ದಾರೆ. ತಕ್ಷಣವೇ ಆತನನ್ನು ತಡೆದು ನಿಲ್ಲಿಸಿ, “ನನ್ನನ್ನು ಏಕೆ ವಿಡಿಯೋ ಮಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿ ಸೌಪಿಕಾ ಆತನಲ್ಲಿ ಫೋನ್ ಅನ್‌ಲಾಕ್ ಮಾಡಿ ತೋರಿಸುವಂತೆ ಪಟ್ಟು ಹಿಡಿದಿದ್ದು, “ನಾನು ಧರಿಸಿರುವ ಉಡುಪು ಇಂತಹ ಹಪಾಹಪಿತನದ ನಡವಳಿಕೆಗೆ ಸಮರ್ಥನೆಯಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ ವಿಡಿಯೋ ಇಲ್ಲಿದೆ ನೋಡಿ:
A woman has filed a police complaint alleging that a fellow passenger secretly recorded her while travelling on Namma Metro near Whitefield on Tuesday, October 27. Bengaluru City Police have confirmed that an FIR has been registered and an investigation is underway.
The woman, identified on Instagram as Sowpika, shared videos of the confrontation on social media, drawing attention to passenger privacy and women’s safety on public transport.
According to her account, the incident occurred at around 4.30 p.m. near the Whitefield–Kadugodi area. She allegedly noticed a man recording her without her consent and confronted him, repeatedly asking why he was filming her.
Videos shared online show Sowpika asking the man to unlock his phone and show its contents. She also expressed frustration over the alleged recording and clarified that her clothing was not a justification for such behaviour.
Sowpika said she sought assistance from Metro security personnel and attempted to prevent the man from leaving before the matter was addressed. According to her account, she managed to get hold of his phone and handed it to security staff during the confrontation.
However, the man allegedly retrieved the phone and fled before the issue could be resolved. He reportedly apologised during the exchange but did not admit to the alleged recording.
Following the incident, Sowpika said she approached Metro station authorities and lodged a complaint. She initially stated that she had been told the matter would be followed up within seven days.
After videos of the confrontation circulated online, Bengaluru City Police asked her to share the location and her contact details. She later visited Kadugodi Police Station, where an FIR was registered.
In a subsequent social media update, Sowpika thanked the police for their response. She also said investigators had identified a few individuals who resembled the man seen in the footage, although his identity had not been conclusively established in the reports available at the time.
The police are investigating the complaint to establish the circumstances of the incident and identify the person involved. The registration of an FIR does not establish the allegations as proven, and further details are awaited.
The incident has renewed discussion about privacy, women’s safety and the handling of complaints on public transport. It has also highlighted the importance of accessible reporting channels and prompt assistance when commuters raise concerns about alleged harassment.
Police have yet to establish the full sequence of events, including the circumstances surrounding the alleged recording and the man’s departure from the scene.
Further details are awaited as the investigation progresses.
— Hate Detector 🔍 (@HateDetectors) October 28, 2026
ಮೆಟ್ರೋ ಸೆಕ್ಯುರಿಟಿ ಸಮ್ಮುಖದಲ್ಲೇ ಓಡಿಹೋದ ಆರೋಪಿ:
ವಿವಾದ ತೀವ್ರಗೊಳ್ಳುತ್ತಿದ್ದಂತೆ ಸೌಪಿಕಾ ಮೆಟ್ರೋ ಭದ್ರತಾ ಸಿಬ್ಬಂದಿಯ ನೆರವು ಪಡೆದಿದ್ದಾರೆ. ಈ ವೇಳೆ ಆತನ ಕೈಯಲ್ಲಿದ್ದ ಫೋನ್ ಕಸಿದುಕೊಂಡು ಸೆಕ್ಯುರಿಟಿ ಸಿಬ್ಬಂದಿಗೆ ನೀಡಲು ಯತ್ನಿಸಿದ್ದಾರೆ. ಆದರೆ, ಆ ವ್ಯಕ್ತಿ ತಾನು ವಿಡಿಯೋ ಮಾಡಿರುವುದನ್ನು ಒಪ್ಪಿಕೊಳ್ಳದೆ ಕ್ಷಮೆ ಯಾಚಿಸಿದ್ದಾನಾದರೂ, ಭದ್ರತಾ ಸಿಬ್ಬಂದಿ ಮತ್ತು ಯುವತಿಯ ಕಣ್ಣು ತಪ್ಪಿಸಿ ಫೋನ್‌ನೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಆರಂಭದಲ್ಲಿ ಮೆಟ್ರೋ ಅಧಿಕಾರಿಗಳು 7 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಕ್ರಿಯರಾದ ಬೆಂಗಳೂರು ನಗರ ಪೊಲೀಸರು, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಮೆಜಾನ್‌ನಲ್ಲಿ ದ್ವಿಚಕ್ರ ವಾಹನಗಳ ಮಾರಾಟ ದುಪ್ಪಟ್ಟು!: ಮೆಟ್ರೋ ಸಿಟಿಗಳನ್ನೇ ಹಿಂದಿಕ್ಕಿದ ಸಣ್ಣ ಪಟ್ಟಣಗಳು
ಪೊಲೀಸ್ ತನಿಖೆ ಚುರುಕು:
ತ್ವರಿತವಾಗಿ ಸ್ಪಂದಿಸಿದ ಬೆಂಗಳೂರು ನಗರ ಪೊಲೀಸರಿಗೆ ಸೌಪಿಕಾ ಧನ್ಯವಾದ ಅರ್ಪಿಸಿದ್ದಾರೆ. ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಹೋಲುವ ಕೆಲವರನ್ನು ಗುರುತಿಸಿದ್ದಾರೆ. ಆರೋಪಿಯ ನಿಖರ ಗುರುತು ಪತ್ತೆಗಾಗಿ ತನಿಖೆ ಮುಂದುವರಿದಿದೆ. ಈ ಘಟನೆಯು ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ, ತಕ್ಷಣದ ದೂರು ಸಲ್ಲಿಕೆ ವ್ಯವಸ್ಥೆ ಹಾಗೂ ಮೆಟ್ರೋ ಭದ್ರತಾ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

