Breaking News

ಅಭಿವೃದ್ಧಿ ವಿಚಾರದಲ್ಲಿ ದಳಪತಿ ಉತ್ಸಾಹ ಕಡಿಮೆಯಾಗಿಲ್ಲ: ದೇವೇಗೌಡ್ರ ಬಗ್ಗೆ ಮೋದಿ ಮೆಚ್ಚುಗೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿರುವ ಹಿನ್ನಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಜೆಡಿಎಸ್ ವರಿಷ್ಠ ಮತ್ತು ರಾಜ್ಯಸಭಾ ಸದಸ್ಯರೂ ಆಗಿರುವ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿದ್ದಾರೆ. ಗೌಡ್ರ ಜೊತೆಗಿನ ಭೇಟಿಯ ಫೋಟೋವನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೋದಿಯವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡ ಫೋಟೋಗೆ ತರಹೇವಾರಿ ಕಾಮೆಂಟುಗಳು ಬಂದಿದೆ. ಅದರಲ್ಲಿ ಒಂದು ನನ್ನ ರಾಷ್ಟ್ರಪತಿ ಎನ್ನುವ ರಿಪ್ಲೈ. ಭೇಟಿಯ ಫೋಟೋ ಜೊತೆ, ಗೌಡರ ದೇಶ ಸೇವೆಯನ್ನು ಪ್ರಧಾನಿಗಳು ಕೊಂಡಾಡಿದ್ದಾರೆ.

Advertisement

ಇದನ್ನೂ ಓದಿ: Delhi : ‘ನಿನ್ನ ಸಹೋದರಿಯನ್ನು ಕೊಲ್ಲುತ್ತಿದ್ದೇನೆ’ : ಕಮಾಂಡೋ ಪತ್ನಿಯ ಕೊಲೆಗೈದ ಪತಿ!

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 28ರಿಂದ ಆರಂಭವಾಗಿದೆ. ಫೆಬ್ರವರಿ ಒಂದರ ಭಾನುವಾರ 2026-27ನೇ ಸಾಲಿನ ಬಜೆಟ್ ಅನ್ನು ಮಂಡಿಸಲಾಗುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿರುವುದು ಎಂದು ಹೇಳಲಾಗುತ್ತಿದೆ. ಬಜೆಟ್ ಅಧಿವೇಶನಕ್ಕಾಗಿ ದೆಹಲಿಯಲ್ಲೇ ಇರುವ ದೇವೇಗೌಡ್ರನ್ನು ಮೋದಿ ಭೇಟಿಯಾಗಿದ್ದಾರೆ.

ದೇವೇಗೌಡರನ್ನು ಭೇಟಿಯಾದ ನಂತರ ಮೋದಿ, ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಹೀಗೆ. ’ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ಬಹಳ ಉಪಯುಕ್ತವಾದ ಮಾತುಕತೆಯನ್ನು ನಡೆಸಲಾಯಿತು. ದೇಶದ ಪ್ರಮುಖ ವಿಷಯಗಳಲ್ಲಿ ಅವರಿಗೆ ಇರುವ ತಿಳುವಳಿಕೆ ಗಮನಾರ್ಹವಾದದ್ದು. ಇದಲ್ಲದೇ, ದೇಶದ ಅಭಿವೃದ್ದಿಯ ವಿಚಾರದಲ್ಲಿ ಅವರಿಗೆ ಇರುವ ಉತ್ಸಾಹವೂ ಕಮ್ಮಿ ಏನೂ ಅಲ್ಲ’ ಎಂದು ಮೋದಿ ಬರೆದುಕೊಂಡಿದ್ದಾರೆ.

ಮೋದಿಯವರು ದೇವೆಗೌಡ್ರನ್ನು ಭೇಟಿಯಾಗುವುದು ಹೊಸದೇನಲ್ಲ. ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಗೌಡ್ರು ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಪ್ರಧಾನಿಯವರು ಭೇಟಿಯಾಗುತ್ತಾರೆ. ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಇಬ್ಬರು ನಾಯಕರ ಸೌಜನ್ಯ ಭೇಟಿ ಇದಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು