ಡಾ. ರಾಜ್‌ಕುಮಾರ್ ಅವರ ‘ಶ್ರೀ ಚಾಮುಂಡೇಶ್ವರಿ’ ಹಾಡು ಶೇರ್ ಮಾಡಿದ ನರೇಂದ್ರ ಮೋದಿ

ದೆಹಲಿ: ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಖ್ಯಾತಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಣ್ಣಾವ್ರ ಧ್ವನಿಯ ‘ಶ್ರೀ ಚಾಮುಂಡೇಶ್ವರಿ’ ಹಾಡನ್ನು ಹಂಚಿಕೊಳ್ಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.1970ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ‘ಶ್ರೀ ಕೃಷ್ಣದೇವರಾಯ’ ಚಿತ್ರದ ‘ಶ್ರೀ ಚಾಮುಂಡೇಶ್ವರಿ..’ ಹಾಡನ್ನು ಮೋದಿ ಅವರು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಕೃಷ್ಣದೇವರಾಯನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು.

ಹಾಡಿನ ಲಿಂಕ್ ಹಂಚಿಕೊಂಡಿರುವ ಪ್ರಧಾನಿಗಳು, “ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ” ಎಂದು ಬರೆದುಕೊಂಡಿದ್ದಾರೆ.ಪ್ರಧಾನಿಯವರು ಕನ್ನಡದ ಲೆಜೆಂಡ್ ಮತ್ತು ಕನ್ನಡದ ಭಕ್ತಿಗೀತೆಯನ್ನು ಗುರುತಿಸಿರುವುದು ಅಣ್ಣಾವ್ರ ಅಭಿಮಾನಿಗಳಲ್ಲಿ ಮತ್ತು ಸಮಸ್ತ ಕನ್ನಡಿಗರಲ್ಲಿ ಹರ್ಷ ತಂದಿದೆ.ಈ ಹಾಡಿಗೆ ಪ್ರಭಾಕರ ಶಾಸ್ತ್ರಿ ಅವರು ಸಾಹಿತ್ಯ ಬರೆದಿದ್ದು, ಟಿ.ಜಿ. ಲಿಂಗಪ್ಪ ಸಂಗೀತ ನೀಡಿದ್ದಾರೆ. ಪಿ. ಲೀಲಾ ಮತ್ತು ಎಸ್. ಗೋವಿಂದರಾಜು ಈ ಹಾಡನ್ನು ಹಾಡಿದ್ದಾರೆ.

Advertisement

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು