Breaking News

T20 Worldcup: ಮೊದಲ ಜಯ ದಾಖಲಿಸಿದ ನೆದರ್ಲೆಂಡ್ಸ್

ದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡ ನೆಮೀಬಿಯಾ ತಂಡದ ಎದುರು 7 ವಿಕೆಟ್‌ಗಳ ಸುಲಭ ಜಯ ಗಳಿಸಿತು.

ಟಾಸ್ ಗೆದ್ದ ನೆದರ್ಲೆಂಡ್ಸ್‌ ತಂಡ ನೆಮೀಬಿಯಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ‌156 ರನ್ ಗಳಿಸಿತು. ಲಾಫ್ಟಿ ಈಟಾನ್ 42 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.

Advertisement

ಇದನ್ನೂ ಓದಿ: ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಉಪಟಳ: ಅರ್ಹರಿಗೆ ಬಂದೂಕು ಪರವಾನಿಗೆ ನಿರಾಕರಿಸಬಾರದು ಎಂದ ಶಾಸಕಿ ಭಾಗೀರಥಿ ಮುರುಳ್ಯ

ಅದರೊಂದಿಗೆ ಜಾನ್ ಫ್ರೈಲಿಂಕ್ 30, ಜೆಜೆ ಸ್ಮಿತ್ 22, ಎರಸ್ಮಸ್ 18 ರನ್ ಗಳಿಸಿದರು. ನೆಮಿಬಿಯ ಪರ ಬಾಸ್ ಡಿ ಲೀಡ್ ಮತ್ತು ಲೊಗಾನ್ ವಾನ್ ಬೀಕ್ ತಲಾ 2 ವಿಕೆಟ್, ಆರ್ಯನ್ ದತ್ತ್, ಫ್ರೆಡ್ ಕ್ಲಾಸಿನ್ ತಲಾ‌ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ನೆದರ್ಲೆಂಡ್ಸ್‌ ತಂಡ 18 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ಬಾಸ್ ಡಿ ಲೀಡ್ ಅಜೇಯ 72 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊಲಿನ್ ಅಕ್ರಮನ್ 32, ಮೈಕೆಲ್ ಲೆವಿಟ್ 28, ಸ್ಕಾಟ್ ಎಡ್ವರ್ಡ್ಸ್ 18 ರನ್ ಗಳಿಸಿದರು. ನೆದರ್ಲೆಂಡ್ಸ್‌ ಪರ ಬರ್ನರ್ಡ್ ಸ್ಕಾಲ್ಟ್ಜ್, ರುಬೆನ್ ಟ್ರಂಪೆಲ್‌ಮನ್ ಮತ್ತು ಲಾಫ್ಟಿ ಈಟನ್ ತಲಾ‌ ಒಂದು ವಿಕೆಟ್ ಪಡೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು