ಮುಂಬೈ: ಟಿ-20 ವಿಶ್ವಕಪ್ ನ ಪಂದ್ಯಾವಳಿಯಲ್ಲಿ ನೇಪಾಳ ತಂಡ ಸ್ಕಾಟ್ಲೆಂಡ್ ತಂಡದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಹಿಂದೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇಲವ 4 ರನ್‌ಗಳ ಅಂತರದಿಂದ ಸೋತು ನಿರಾಸೆಗೊಂಡಿದ್ದ ನೇಪಾಳ ಇಂದು ಸ್ಕಾಟ್ಲೆಂಡ್ ವಿರುದ್ಧ ಜಯ ಸಾಧಿಸಿ ವಿಶ್ವಕಪ್ ಅಭಿಯಾನ ಮುಗಿಸಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: ಬಂಗಾರಡ್ಕ: ದಿವಂಗತ ಗೋಪಾಲ ನಾಯ್ಕ ಕುಟುಂಬಕ್ಕೆ ‘ಅರುಣ ಸಾರಥಿ’ ಸಂಘಟನೆಯಿಂದ ಧನಸಹಾಯ
ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ತಂಡದ ಪರ ಮೈಕಲ್ ಜೋನ್ಸ್ 71, ಜಾರ್ಜ್ ಮುನ್ಸೆ 27, ಬ್ರೆಂಡನ್ ಮ್ಯಾಕ್ ಮುಲೆನ್ 25 ರನ್ ಗಳಿಸಿದರು. ನೇಪಾಳ ಪರ ಸೊಂಪಾಲ್ ಕಮಿ 3, ನಂದನ್ ಯಾದವ್ 2, ರೋಹಿತ್ ಪೌದೇಲ್ ಮತ್ತು ಕುಶಾಲ್ ಭುಟ್ರೇಲ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ನೇಪಾಳ ತಂಡಕ್ಕೆ ಉತ್ತಮ ಆರಂಭ ಒದಗಿತು. ಕುಶಾಲ್ ಭುಟ್ರೇಲ್ (43) ಮತ್ತು ಆಸಿಫ್ ಶೇಕ್ (33) ಜೋಡಿ ಮೊದಲ ವಿಕೆಟ್ ಗೆ 74 ರನ್ ಪೇರಿಸಿತು. ನಾಯಕ ರೋಹಿತ್ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ದೀಪೇಂದ್ರ ಸಿಂಗ್ ಐರಿ ಮತ್ತು ಗುಲ್ಶನ್ ಜಾ ತಂಡವನ್ನು ಗುರಿ ತಲುಪಿಸಿದರು.
ದೀಪೇಂದ್ರ ಸಿಂಗ್ ಐರಿ 23 ಎಸೆತಗಳಲ್ಲಿ ಅಜೇಯ 50 ಮತ್ತು ಗುಲ್ಶನ್ ಜಾ ಅಜೇಯ 24 ರನ್ ಗಳಿಸಿದರು. ಸ್ಕಾಟ್ಲೆಂಡ್ ಪರ ಮಾರ್ಕ್ ವ್ಯಾಟ್ 3 ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

