Breaking News

Viral: ವಿಜಯ್, ರಶ್ಮಿಕಾ ಮದುವೆ ಲೈವ್‌ಗೆ 60 ಕೋಟಿ ಆಫರ್!

ಟಾಲಿವುಡ್​ನ ಜನಪ್ರಿಯ ಸೆಲೆಬ್ರಿಟಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ.

ಫೆಬ್ರವರಿ 26ರಂದು ಉದಯಪುರದಲ್ಲಿ ಈ ವಿವಾಹ ನಡೆಯಲಿದೆ ಎನ್ನಲಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ಒಟಿಟಿ ಕಂಪನಿ ವಿಜಯ್ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಭಾರಿ ಮೊತ್ತದ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಆದರೆ, ಅವರು ಇದನ್ನು ತಿರಸ್ಕರಿಸಿದ್ದಾರಂತೆ.

Advertisement

ಇದನ್ನೂ ಓದಿ: ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಪೋಸ್ಟ್: ಅರಗ ಜ್ಞಾನೇಂದ್ರ ಪಿಎ ಬಂಧನ

ಸೆಲೆಬ್ರಿಟಿಗಳ ವಿವಾಹ ನೋಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇರುತ್ತದೆ. ಈ ಕಾರಣದಿಂದಲೇ ಸೆಲೆಬ್ರಿಟಿಗಳ ವಿವಾಹದ ಹಕ್ಕನ್ನು ಪಡೆಯಲು ಒಟಿಟಿ ತಾಣಗಳು ಪ್ರಯತ್ನಿಸುತ್ತವೆ.

ಈಗ ವಿಜಯ್ ಹಾಗೂ ರಶ್ಮಿಕಾ ವಿಷಯದಲ್ಲಿ ಹಾಗೆಯೇ ಮಾಡಲು ನೆಟ್​​ಫ್ಲಿಕ್ಸ್ ಮುಂದಾಗಿತ್ತು ಎನ್ನಲಾಗಿದೆ. ಆದರೆ, ಇದು ಅಸಾಧ್ಯ ಎಂದು ವಿಜಯ್ ಹೇಳಿದ್ದಾರಂತೆ. ಅವರು ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದಾರೆ.

60 ಕೋಟಿ ರೂಪಾಯಿ ಕೊಟ್ಟು ಈ ಡೀಲ್ ಪಡೆಯಲು ನೆಟ್​​ಪ್ಲಿಕ್ಸ್ ಪ್ರಯತ್ನಿಸಿತ್ತು. ಆದರೆ, ವಿವಾಹ ಅನ್ನೋದು ಖಾಸಗಿ ವಿಷಯ. ಅದನ್ನು ಎಲ್ಲರಿಗೂ ತೋರಿಸುವ ಉದ್ದೇಶ ವಿಜಯ್​ಗೆ ಇಲ್ಲ.

ಒಂದೊಮ್ಮೆ ವಿವಾಹದ ಹಕ್ಕನ್ನು ಒಟಿಟಿಗೆ ನೀಡಿದರೆ ಆ ಬಳಿಕ ಸಾಕಷ್ಟು ಷರತ್ತುಗಳು ಕೂಡ ಬರುತ್ತವೆ. ಇದರಿಂದ ಬಂದ ಅತಿಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ, ಇದಕ್ಕೆ ದಂಪತಿ ಬೇಡ ಎಂದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು