Breaking News

ನ್ಯೂ ಇಂಡಿಯಾ ಲಕ್ಕಿ ಸ್ಕೀಂ ವಂಚನೆ ಪ್ರಕರಣ: ಮಂಗಳೂರಿನಲ್ಲಿ ಪ್ರತಿಭಟನೆ

New India Lucky Scheme scam case: Protest in Mangalore

ಮಂಗಳೂರು: ನ್ಯೂ ಇಂಡಿಯಾ ಲಕ್ಕೀ ಸ್ಕೀಂ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣ ಸಂಬಂಧ ಹಣ ಕಳೆದುಕೊಂಡ ಸಂತ್ರಸ್ತರು ಜ.15 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧದ ಸಮೀಪದ ಕ್ಲಾಕ್‌ ಟವರ್‌ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಲು ಮುಂದಾಗಿದ್ದಾರೆ.

ಈಗಾಗಲೆ ನ್ಯೂ ಇಂಡಿಯಾ ಲಕ್ಕಿ ಸ್ಕೀಂನ 14ನೇ ಸೀಸನ್‌ನಲ್ಲಿ 10 ಸಾವಿರ ರೂ., ಹಾಗೆಯೇ 15ನೇ ಸೀಸನ್‌ನಲ್ಲಿ ಏಳು ಸಾವಿರ ರೂ. ಪಾವತಿಸಲಾಗಿದೆ. 14ನೇ ಸೀಸನ್ ಮುಗಿದು ಒಂದು ವರ್ಷ ಕಳೆದರು ಗ್ರಾಹಕರಿಗೆ ಕೊಡಬೇಕಾದ 10 ಸಾವಿರ ರೂ. ಕೊಡದೆ ವಂಚಿಸಿದ ನ್ಯೂ ಇಂಡಿಯಾ ಸಂಸ್ಥೆ ಮಾಲಿಕ ಅಶ್ರಪ್ ಬಜ್ಪೆ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ.

Advertisement

ಇದನ್ನೂ ಓದಿ: ಶಬರಿಮಲೆ‌ ದೇವಾಲಯದ ಚಿನ್ನ ಕಳವು ಪ್ರಕರಣ: ಪ್ರಧಾನ ಅರ್ಚಕ ಅರೆಸ್ಟ್

ಅಶ್ರಫ್‌ ಮೋಸಕ್ಕೆ ಬಲಿಯಾದ ಗ್ರಾಹಕರಿಗೆ ಹಣ ಕೊಡಿಸುವ ನಿಟ್ಟಿನಲ್ಲಿ ಲಕ್ಕೀ ಸ್ಕೀಂ ಸಂತ್ರಸ್ತರ ವೇದಿಕೆಯು ಜ.15ರಂದು ಮಂಗಳೂರು ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿ ನ್ಯಾಯ ಒದಗಿಸುವಂತೆ ದಕ್ಕಿಣ ಕನ್ನಡ ಜಿಲ್ಲಾಧಿಕಾರಿ, ಮಂಗಳೂರು ನಗರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ನೀಡಲಾಗುತ್ತದೆ ಎಂದು ವೇದಿಕೆಯು ಪ್ರಕರಣೆಯಲ್ಲಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್‌ ಮಾಡಿ

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು