ದೆಹಲಿ: ಖಾಸಗಿ ಮತ್ತು ಸರ್ಕಾರಿ ವಲಯದ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೊಸ ಕಾರ್ಮಿಕ ಸಂಹಿತೆ (New Labour Law) ಅನ್ವಯ, ಯಾವುದೇ ನೌಕರ ಕೆಲಸಕ್ಕೆ ರಾಜೀನಾಮೆ ನೀಡಿದ ಅಥವಾ ಕೆಲಸದಿಂದ ವಜಾಗೊಂಡ 2 ದಿನಗಳೊಳಗೆ (48 ಗಂಟೆ) ಅವರ ಬಾಕಿ ಇರುವ ಸಂಪೂರ್ಣ ವೇತನ ಮತ್ತು ಬೋನಸ್ ಅನ್ನು ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಮೊದಲು ನೌಕರರು ಕೆಲಸ ಬಿಟ್ಟ ನಂತರ ಫುಲ್ ಸೆಟಲ್ಮೆಂಟ್ (Full and Final Settlement) ಪಡೆಯಲು ವಾರಗಳು ಅಥವಾ ತಿಂಗಳುಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಕಂಪನಿಗಳು ಕೇವಲ 2 ದಿನಗಳಲ್ಲಿ ಈ ಪ್ರಕ್ರಿಯೆ ಮುಗಿಸಬೇಕು. ನೌಕರ ಸ್ವತಃ ರಾಜೀನಾಮೆ ನೀಡಿದಾಗ, ಕಂಪನಿಯಿಂದ ವಜಾಗೊಂಡಾಗ ಅಥವಾ ಉದ್ಯೋಗದ ಅವಧಿ ಮುಗಿದಾಗ ಈ ನಿಯಮ ಅನ್ವಯವಾಗುತ್ತದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ: ಇನ್ನು ಡೀಸೆಲ್ಗಿಲ್ಲ ಅಬಕಾರಿ ಸುಂಕ! ಪೆಟ್ರೋಲ್ ಸುಂಕ ಭಾರಿ ಕಡಿತ
ಕೇವಲ ಮಾಸಿಕ ವೇತನ ಮಾತ್ರವಲ್ಲದೆ, ಬಾಕಿ ಇರುವ ಬೋನಸ್ ಮತ್ತು ಇತರ ಆರ್ಥಿಕ ಸೌಲಭ್ಯಗಳನ್ನು ಸಹ ಇದೇ ಅವಧಿಯಲ್ಲಿ ಪಾವತಿಸಬೇಕೆಂದು ಕಾಯ್ದೆ ಹೇಳುತ್ತದೆ. ಉದ್ಯೋಗಿಗಳಿಗೆ ಆಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸುವುದು ಮತ್ತು ಕಂಪನಿಗಳು ವೇತನ ಪಾವತಿಯಲ್ಲಿ ಮಾಡುವ ವಿಳಂಬಕ್ಕೆ ಕಡಿವಾಣ ಹಾಕುವುದು ಈ ಕಾಯ್ದೆಯ ಮುಖ್ಯ ಗುರಿ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

