ನವ ಮಂಗಳೂರು ಬಂದರಿನಲ್ಲಿ ಐತಿಹಾಸಿಕ ದಾಖಲೆ: 40,000ನೇ ಹಡಗಿನ ಆಗಮನ!

ಮಂಗಳೂರು: ಪಶ್ಚಿಮ ಕರಾವಳಿಯ ಪ್ರಮುಖ ಸಮುದ್ರ ದ್ವಾರವಾಗಿರುವ ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಗುರುವಾರ ತನ್ನ ಇತಿಹಾಸದಲ್ಲೇ ಅತ್ಯಂತ ಮಹತ್ವದ ಸಾಧನೆಯನ್ನು ಮಾಡಿದೆ. ಬಂದರು ಸ್ಥಾಪನೆಯಾದ ನಂತರ ಆಗಮಿಸಿದ 40,000ನೇ ಹಡಗು ಎಂಬ ಹೆಗ್ಗಳಿಕೆಗೆ ‘ಎಂ.ಟಿ. ಅಪೋಲೋ ಓಶನ್’ ಪಾತ್ರವಾಗಿದೆ.

ಎಲ್‌ಪಿಜಿ ಟ್ಯಾಂಕರ್ ಆಗಿರುವ ‘ಎಂ.ಟಿ. ಅಪೋಲೋ ಓಶನ್’ ಗುರುವಾರ ಸಂಜೆ 4 ಗಂಟೆಗೆ ಬರ್ತ್ ಸಂಖ್ಯೆ 13ಕ್ಕೆ ಆಗಮಿಸಿತು. ಈ ವೇಳೆ ಬಂದರು ಪ್ರಾಧಿಕಾರದ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಹಡಗಿನ ಕ್ಯಾಪ್ಟನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಿದರು.

Advertisement

ಈ ಹಡಗು ಒಟ್ಟು 16,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಇಳಿಸಲಿದೆ. ಇದು ಕರಾವಳಿ ಮತ್ತು ಪ್ರಾದೇಶಿಕ ಭಾಗದ ಗೃಹ ಹಾಗೂ ಕೈಗಾರಿಕಾ ಬಳಕೆಯ ಇಂಧನದ ಅಗತ್ಯವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 40,000ನೇ ಹಡಗಿನ ಆಗಮನವು ನವ ಮಂಗಳೂರು ಬಂದರಿನ ಕಾರ್ಯಕ್ಷಮತೆ, ತಾಂತ್ರಿಕ ಬೆಳವಣಿಗೆ ಮತ್ತು ಜಾಗತಿಕ ಮಟ್ಟದ ವ್ಯಾಪಾರ ಸಂಪರ್ಕದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ಮಂಗಳೂರು: ತೊಕ್ಕೊಟ್ಟು ಫ್ಲೈಓವರ್ ಮೇಲೆ ರೌಡಿಶೀಟರ್ ಹತ್ಯೆ! ಹಗಲು ಹೊತ್ತಲ್ಲೇ ಗ್ಯಾಂಗ್ ವಾರ್ ಶಂಕೆ

ನವ ಮಂಗಳೂರು ಬಂದರು ಕರ್ನಾಟಕದ ಏಕೈಕ ಪ್ರಮುಖ ಬಂದರಾಗಿದ್ದು, ರಫ್ತು ಮತ್ತು ಆಮದು ಪ್ರಕ್ರಿಯೆಯಲ್ಲಿ ರಾಜ್ಯದ ಬೆನ್ನೆಲುಬಾಗಿದೆ. ಈ ಮೈಲುಗಲ್ಲು ಬಂದರಿನ ಮೂಲಸೌಕರ್ಯ ಮತ್ತು ಸಾಮರ್ಥ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು