Breaking News

T20 Worldcup: ಸೋಲಿನೊಂದಿಗೆ ವಿಶ್ವಕಪ್‌ ಇಂದ ಹೊರ ಬಿದ್ದ ಅತಿಥೇಯ ಶ್ರೀಲಂಕಾ

ಕೊಲೊಂಬೊ: ಟಿ-20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 61 ರನ್‌ಗಳ ಅಂತರದಿಂದ ಸೋತು ಅತಿಥೇಯ ಶ್ರೀಲಂಕಾ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.

ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 7 ವಿಕೆಟ್ ನಷ್ಟಕ್ಕೆ 168 ರ‌ನ್ ಗಳಿಸಿತು.

Advertisement

ಇದನ್ನೂ ಓದಿ: ಅಪ್ರಾಪ್ತೆಯ ಮುದ್ದಾಡಿ ಅನುಚಿತ ವರ್ತನೆ: ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ನಾಯಕ ಮಿಚೆಲ್ ಸ್ಯಾಂಟ್ನರ್ 26 ಎಸೆತಗಳಲ್ಲಿ 47, ರಚಿನ್ ರವೀಂದ್ರ 32, ಕೋಲ್ ಮೆಕೊಂಚಿ ಅಜೇಯ 31, ಫಿನ್ ಅಲೆನ್ 23 ರನ್ ಗಳಿಸಿದರು‌. ಶ್ರೀಲಂಕಾ ಪರ ಮಹೇಶ್ ತೀಕ್ಷಣ ಮತ್ತು ದುಶ್ಯಂತ ಚಮೀರ ತಲಾ 3 ಮತ್ತು ಧುನಿತ್ ವೆಲ್ಲಲಗೆ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಶ್ರೀಲಂಕಾ ಮೊದಲ ಎಸೆತದಲ್ಲೇ ಪಥುಮ್ ನಿಸಂಕ ಮ್ಯಾಟ್ ಹೆನ್ರಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಅನುಭವಿಸಿದರು. ತಂಡದ ಪರ ಕಮಿಂಡು ಮೆಂಡಿಸ್ 31, ಧುನಿತ್ ವೆಲ್ಲಲಗೆ 29 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 4, ಮ್ಯಾಟ್ ಹೆನ್ರಿ‌ 2, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದರು.

ಅಂತಿಮವಾಗಿ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ, 61 ರನ್‌ಗಳಿಂದ ಸೋಲನ್ನನುಭವಿಸಿತು. ಇದರೊಂದಿಗೆ ಅಧಿಕೃತವಾಗಿ ವಿಶ್ವಕಪ್ ಇಂದ ಹೊರಬಿದ್ದಿತು‌.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು