Breaking News

ಟಿ–20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ಬರೆದ ನ್ಯೂಜೀಲ್ಯಾಂಡ್! ಸೈಫರ್ಟ್‌ ಈ ಪಂದ್ಯದ ಹೀರೋ

New Zealand has created a record in the history of the T20 World Cup!

ಟಿ–20 ವಿಶ್ವಕಪ್‌ನ ಗ್ರೂಪ್–ಡಿ ಪಂದ್ಯದಲ್ಲಿ ನ್ಯೂ ಜೀಲ್ಯಾಂಡ್ ತಂಡ ಅಫ್ಘಾನಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದು ವಿಕೆಟ್‌ಕೀಪರ್ ಬ್ಯಾಟರ್ ಟಿಮ್ ಸೈಫರ್ಟ್.

ಆಕ್ರಮಣಕಾರಿ ಆಟಕ್ಕೆ ಖ್ಯಾತರಾಗಿರುವ ಸೈಫರ್ಟ್, 42 ಎಸೆತಗಳಲ್ಲಿ 65 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ‘ಬ್ಯಾಮ್ ಬ್ಯಾಮ್’ ಎಂಬ ತಮ್ಮ ಅಡ್ಡಹೆಸರಿಗೆ ತಕ್ಕಂತೆ ಆಟವಾಡಿದ ಸೈಫರ್ಟ್, 183 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ಸುಲಭವಾಗಿ ದಾಟಲು ನೆರವಾದರು.

Advertisement

14 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಸಂಕಷ್ಟದ ಸ್ಥಿತಿಯಲ್ಲಿ, ಸೈಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ (42 ರನ್, 25 ಎಸೆತ) ಮೂರನೇ ವಿಕೆಟ್‌ಗೆ 47 ಎಸೆತಗಳಲ್ಲಿ 74 ರನ್‌ಗಳ ಜೊತೆಯಾಟ ಆಡಿದರು. ಈ ಗೆಲುವು ಟಿ–20 ವಿಶ್ವಕಪ್ ಇತಿಹಾಸದಲ್ಲೇ ನ್ಯೂ ಜೀಲ್ಯಾಂಡ್‌ನ  ಅತಿ ದೊಡ್ಡ ಯಶಸ್ವಿ ರನ್ ಚೇಸ್ ಆಗಿದೆ.

ಇದನ್ನೂ ಓದಿ: T20 World Cup: ನೇಪಾಳದ ವಿರುದ್ಧ ಗೆಲ್ಲಲು ಪರದಾಡಿದ ಇಂಗ್ಲೆಂಡ್‌

ಆರಂಭದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹ್ಮಾನ್ ಫಿನ್ ಆಲೆನ್ ಮತ್ತು ರಚಿನ್ ರವೀಂದ್ರ ಅವರನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್‌ಗೆ ಆಘಾತ ನೀಡಿದ್ದರು. ಆದರೆ ಸೈಫರ್ಟ್ ಆಟ ಮುಂದುವರಿದಂತೆ ಪಿಚ್‌ನಲ್ಲಿದ್ದ ಸ್ಪಿನ್ನರ್‌ಗಳಿಗೆ ದೊರಕುತ್ತಿದ್ದ ಸಹಾಯ ಕಡಿಮೆಯಾಯಿತು.

ಗ್ಲೆನ್ ಫಿಲಿಪ್ಸ್ ರಶೀದ್ ಖಾನ್ ವಿರುದ್ಧ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ರನ್ ವೇಗ ಹೆಚ್ಚಿಸಿದರು. ನಂತರ ನಬಿ ಸೈಫರ್ಟ್ ಅವರನ್ನು ಔಟ್ ಮಾಡಿದರೂ, ರಶೀದ್ ಫಿಲಿಪ್ಸ್ ವಿಕೆಟ್ ಪಡೆದರೂ, ಆಗಾಗಲೇ ನ್ಯೂ ಜೀಲ್ಯಾಂಡ್ ಗೆಲುವಿಗೆ ಹತ್ತಿರವಾಗಿತ್ತು. ಡ್ಯಾರಿಲ್ ಮಿಚೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಉಳಿದ ರನ್‌ಗಳನ್ನು ಸುಲಭವಾಗಿ ಕಲೆಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು