Breaking News

T20 Worldcup: ಯುವರಾಜ್ ಸಮ್ರ ಶತಕದ ಹೊರತಾಗಿಯೂ ಪಂದ್ಯ ಕೈಚೆಲ್ಲಿದ ಕೆನಡಾ

ಚೆನ್ನೈ: ಟಿ-20 ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಕೆನಡಾ ತಂಡದ ವಿರುದ್ಧ ಜಯ ಗಳಿಸಿ ಸೂಪರ್ -8 ಹಂತಕ್ಕೆ ಅರ್ಹತೆ ಪಡೆಯಿತು. ಕೆನಡಾದ ಯುವ ಆಟಗಾರ ಯುವರಾಜ್ ಸಮ್ರ ಅವರ ಆಕರ್ಷಕ ಶತಕದ ಹೊರತಾಗಿಯೂ ತಂಡ ಗಳಿಸಿದ ಮೊತ್ತವನ್ನು ತಡೆಹಿಡಿಯುವಲ್ಲಿ ವಿಫಲವಾಯಿತು.

ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭ ಪಡೆದ ಕೆನಡಾ 10ರ ಸರಾಸರಿಯಲ್ಲಿ ರನ್ ಗಳಿಸುತ್ತಾ ಸಾಗಿತು. ಮೊದಲ ವಿಕೆಟ್‌ಗೆ ದಿಲ್‌ಪ್ರೀತ್ ಬಜ್ವ ಮತ್ತು ಯುವರಾಜ್ ಸಮ್ರ 84 ಎಸೆತಗಳಲ್ಲಿ 116 ರನ್ ಪೇರಿಸಿದರು.

Advertisement

ಇದನ್ನೂ ಓದಿ: ರಿಂಗ್ ಆಫ್ ಫೈಯರ್ ಆನಿಮೇಷನ್ ಬಿಡುಗಡೆ ಮಾಡಿದ ಗೂಗಲ್

ತಂಡದ ಪರ ಯುವರಾಜ್ ಸಮ್ರ 65 ಎಸೆತಗಳಲ್ಲಿ 110 ರನ್ ಗಳಿಸಿ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ದಿಲ್‌ಪ್ರೀತ್ ಬಜ್ವ 36, ನವನೀತ್ ಧಲಿವಾಲ್ 10 ರನ್ ಗಳಿಸಿದರು‌. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ಜಾಕೊಬ್ ಢಫಿ, ಕೈಲ್ ಜೆಮಿಸನ್ ಮತ್ತು ಜೇಮ್ಸ್ ನೀಶಂ ತಲಾ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಕೆನಡಾ 173 ರನ್ ಕಲೆ ಹಾಕಿತು.

ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭದಲ್ಲಿ ಕೇವಲ 6 ರನ್ ಗಳಿಸಿದ ಟಿಮ್ ಸೈಫರ್ಟ್ ಅವರ ವಿಕೆಟ್ ಕಳೆದುಕೊಂಡಿತು. ಕೆಲವೇ ಅಂತರದಲ್ಲಿ 21 ರ‌ನ್ ಗಳಿಸಿದ ಫಿನ್ ಅಲೆನ್ ಕೂಡ ವಿಕೆಟ್ ಚೆಲ್ಲಿದರು. ನಂತರ ಜೊತೆಯಾದ ರಚಿನ್ ರವೀಂದ್ರ ಮತ್ತು ಗ್ಲೆನ್ ಫಿಲಿಪ್ಸ್ ಮುರಿಯದ ವಿಕೆಟ್‌ಗೆ 72 ಎಸೆತಗಳಲ್ಲಿ 146 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು‌. ಗ್ಲೆನ್ ಫಿಲಿಪ್ಸ್ 76, ರಚಿನ್ ರವೀಂದ್ರ 59 ರನ್ ಗಳಿಸಿದರು‌. ಕೆನಡಾ ಪರ ದಿಲ್ಲೊನ್ ಹೈಲಿಂಗರ್ ಮತ್ತು ಸಾದ್ ಬಿನ್ ಜಾಫರ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು