Breaking News

NORAD : ಶೀಘ್ರದಲ್ಲೇ NORAD ಸೇನಾ ವಿಮಾನಗಳು ಗ್ರೀನ್’ಲ್ಯಾಂಡ್’ಗೆ

ವಾಷಿಂಗ್ಟನ್ : ಉತ್ತರ ಅಮೆರಿಕದ ಏರೋಸ್ಪೇಸ್ ರಕ್ಷಣಾ ಕಮಾಂಡ್ (NORAD)ಗೆ ಸೇರಿದ ಸೇನಾ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಪಿಟುಫಿಕ್ ಸ್ಪೇಸ್ ಬೇಸ್‌ಗೆ ಆಗಮಿಸಲಿವೆ ಎಂದು ಸಂಸ್ಥೆ ಪ್ರಕಟಿಸಿದೆ.

ಅಮೆರಿಕಾ ಮತ್ತು ಕೆನಡಾ ಸಂಯುಕ್ತವಾಗಿ ನಡೆಸುತ್ತಿರುವ ಈ ಸೇನಾ ಸಂಸ್ಥೆ, ಈ ಚಟುವಟಿಕೆಗಳು ದೀರ್ಘಕಾಲದಿಂದ ಯೋಜಿಸಲಾದವು ಎಂದು ಹೇಳಿದ್ದು, ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿವೆ ಎಂದು ತಿಳಿಸಿದೆ. ಈ ಘೋಷಣೆ, ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಬೇಕು ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಡಿಕೆಯ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜಕೀಯ ಉದ್ವಿಗ್ನತೆಯ ಮಧ್ಯೆ ಬಂದಿದೆ. ಇದುವರೆಗೆ ಪಿಟುಫಿಕ್ ಸ್ಪೇಸ್ ಬೇಸ್‌ನಲ್ಲಿ ನಡೆಯಲಿರುವ ಚಟುವಟಿಕೆಗಳ ಸ್ವರೂಪವನ್ನು NORAD ವಿವರಿಸಿಲ್ಲ. ಆದರೆ ಈ ಕಾರ್ಯಾಚರಣೆಗಳನ್ನು ಡೆನ್ಮಾರ್ಕ್ ಸರ್ಕಾರದೊಂದಿಗೆ ಸಂಯೋಜಿಸಲಾಗಿದ್ದು, ಗ್ರೀನ್‌ಲ್ಯಾಂಡ್ ಆಡಳಿತಕ್ಕೂ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

Advertisement

ಅಮೆರಿಕದ ಮುಖ್ಯಭಾಗ ಹಾಗೂ ಕೆನಡಾದಲ್ಲಿರುವ ಸೇನಾ ನೆಲೆಗಳಿಂದ ಕಾರ್ಯಾಚರಣೆ ನಡೆಸುವ ವಿಮಾನಗಳ ಜೊತೆಗೂಡಿ, ಗ್ರೀನ್‌ಲ್ಯಾಂಡ್‌ಗೆ ಆಗಮಿಸುವ ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದು NORAD ತಿಳಿಸಿದೆ. ಈ ವಿಮಾನಗಳು ಅಮೆರಿಕಾ, ಕೆನಡಾ ಮತ್ತು ಡೆನ್ಮಾರ್ಕ್ ಸಾಮ್ರಾಜ್ಯದ ನಡುವಿನ ದೀರ್ಘಕಾಲದ ರಕ್ಷಣಾ  ಸಹಕಾರದ ಮೇಲೆ ನಿರ್ಮಿತವಾದ ಹಲವಾರು ಯೋಜಿತ ಚಟುವಟಿಕೆಗಳಿಗೆ ಬೆಂಬಲ ನೀಡಲಿವೆ, ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.ಇದೇ ವೇಳೆ, ಉತ್ತರ ಅಮೆರಿಕದ ರಕ್ಷಣೆಯ ಸಲುವಾಗಿ NORAD ನಿಯಮಿತವಾಗಿ ವಿಸ್ತೃತ ಮತ್ತು ನಿರಂತರ ಕಾರ್ಯಾಚರಣೆಗಳನ್ನು ನಡೆಸುತ್ತಿದೆ, ಎಂದೂ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : ಶಬರಿಮಲೆ ಚಿನ್ನ ಕಳವು ಪ್ರಕರಣ: ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಇಡಿ ದಾಳಿ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು