ವಾಷಿಂಗ್ಟನ್: ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ‘ಎಪಿಕ್ ಫ್ಯೂರಿ’ (Epic Fury) ಕಾರ್ಯಾಚರಣೆಯನ್ನು ಪಾಕಿಸ್ತಾನ ಖಂಡಿಸಿದೆ. ಇದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಅಮೇರಿಕಾದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲು ಕಾರಣವಾಗಿದ್ದು, ಈಗ ಟ್ರಂಪ್ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ಪಾಕಿಸ್ತಾನದ ರಾಯಭಾರಿ ಆಸಿಂ ಇಫ್ತಿಕರ್ ಅಹ್ಮದ್, ಇರಾನ್ ಮೇಲಿನ ಅಮೇರಿಕಾದ ದಾಳಿಯನ್ನು “ಅನಗತ್ಯ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ” ಎಂದು ಕರೆಯುವ ಮೂಲಕ ಪಾಕಿಸ್ತಾನದ ಅಧಿಕೃತ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನ ಮತ್ತು ಅಮೇರಿಕಾ ನಡುವಿನ ಸಂಬಂಧ ಸುಧಾರಿಸಿತ್ತು. ಟ್ರಂಪ್ ಅವರು ಶೆಹಬಾಜ್ ಷರೀಫ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು “ಶ್ರೇಷ್ಠ ನಾಯಕರು” ಎಂದು ಹೊಗಳಿದ್ದರು. ಆದರೆ ಈಗ ಪಾಕಿಸ್ತಾನವು ಇರಾನ್ ಪರವಾಗಿ ಮಾತನಾಡಿರುವುದು ಟ್ರಂಪ್‌ಗೆ ಇಷ್ಟವಾಗಿಲ್ಲ.

ಇದನ್ನೂ ಓದಿ: ನೆತನ್ಯಾಹು ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ: ಇಸ್ರೇಲ್ ಪ್ರಧಾನಿ ಸ್ಥಿತಿಗತಿ “ನಿಗೂಢ” ಎಂದ ಇರಾನ್?
ಅಮೇರಿಕಾವು ಅಫ್ಘಾನಿಸ್ತಾನದ ತಾಲೀಬಾನ್ ವಿರುದ್ಧದ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಇರಾನ್ ಪರ ನಿಲ್ಲುವುದು ತನ್ನ ಹಿತಾಸಕ್ತಿಗೆ ವಿರುದ್ಧ ಎಂದು ಟ್ರಂಪ್ ಆಡಳಿತ ಭಾವಿಸಿದೆ. ಇರಾನ್‌ನ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಅಥವಾ ಅವರ ಪರವಾಗಿ ವಾದಿಸುವ ದೇಶಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಸೂಚ್ಯವಾಗಿ ಎಚ್ಚರಿಸಿದ್ದಾರೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಅಡಿ

