ಕೊಲೊಂಬೊ: ಟಿ-20 ವಿಶ್ವಕಪ್ನ ‘ಎ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ಯುಎಸ್ಎ ತಂಡದ ವಿರುದ್ಧ 32 ರನ್ಗಳ ಜಯ ಸಾಧಿಸಿದೆ.
ಇಲ್ಲಿನ ಸಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.

ಇದನ್ನೂ ಓದಿ: ಶಾಪಿಂಗ್ ಮಾಲ್ನಲ್ಲಿ ಬೇರೊಬ್ಬ ಯುವತಿಯೊಂದಿಗೆ ಪತಿಯನ್ನು ಕಂಡು ಪತ್ನಿ ಮಾಡಿದ್ದೇನು ನೋಡಿ?
ಶಬಿಬ್ಜಾದ ಫರ್ಹಾನ್ 41 ಎಸೆತಗಳಲ್ಲಿ 73, ಬಾಬರ್ ಅಜಂ 46, ಶದಾಬ್ ಖಾನ್ 30 ರನ್ ಗಳಿಸಿದರು. ಯುಎಸ್ಎ ಪರ ಶ್ಕಾಲ್ವೈಕ್ 4, ಸೌರಭ್ ನೆಟ್ರವಲ್ಕರ್, ಮೊಹಮ್ಮದ್ ಮೊಹ್ಸಿನ್ ಮತ್ತು ಹರ್ಮೀತ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಯುಎಸ್ಎ ಪಾಕಿಸ್ತಾನದ ಸ್ಪಿನ್ ದಾಳಿಗೆ ಸಿಲುಕಿ 8 ವಿಕೆಟ್ ಕಳೆದುಕೊಂಡು 158 ರನ್ ಗಳಿಸಲಷ್ಟೇ ಶಕ್ತವಾಯ್ತು. ಶುಭಂ ರಂಜಾನೆ 51, ಶಾಯನ್ ಜಹಾಂಗೀರ್ 49, ಮಿಲಿಂದ್ ಕುಮಾರ್ 29 ರನ್ ಗಳಿಸಿದರು. ಪಾಕಿಸ್ತಾನ ಪರ ಉಸ್ಮಾನ್ ತಾರಿಕ್ 3, ಶದಾಬ್ ಖಾನ್ 2, ಮೊಹಮ್ಮದ್ ನವಾಜ್, ಅಬ್ರರ್ ಅಹ್ಮದ್ ಮತ್ತು ಶಹೀನ್ ಅಫ್ರೀದಿ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

