Breaking News

ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ವೈರಲ್‌: ಮೂವರು ಅರೆಸ್ಟ್

Physical assault on woman, video goes viral Three arrested in hubli

ಹುಬ್ಬಳ್ಳಿ: ಮಧ್ಯರಾತ್ರಿಯಲ್ಲಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿ ಅದರ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳು ಮತ್ತು ಕೃತ್ಯದ ವಿಡಿಯೋಗಳನ್ನು ವೈರಲ್‌ ಮಾಡಿದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಜನವರಿ 9 ರಂದು ರಾತ್ರಿ 11.30 ರಿಂದ ಮಧ್ಯರಾತ್ರಿಯ ನಡುವೆ ಮಹಿಳೆಯನ್ನು ಅಂಬೇಡ್ಕರ್ ಮೈದಾನದಿಂದ ಆಟೋರಿಕ್ಷಾದಲ್ಲಿ ಕರೆದೊಯ್ಯಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಹೇಳಿದ್ದಾರೆ. “ಇಬ್ಬರು ವ್ಯಕ್ತಿಗಳು ಆಕೆಯ ಜೊತೆ ಕೆಟ್ಟದಾಗಿ ವರ್ತಿಸಿ ದೈಹಿಕ ಸಂಪರ್ಕ ಬೆಳೆಸಿದರು ಮತ್ತು ಬಲವಂತವಾಗಿ ಮದ್ಯ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯನ್ನು ಅಂಬೇಡ್ಕರ್ ಮೈದಾನದಲ್ಲಿ ಬಿಡುವ ಮೊದಲು ಅವರು ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದಿದ್ದಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಅತ್ಯಾಚಾರದ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹುಬ್ಬಳ್ಳಿ ನಗರದಲ್ಲಿ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ.

“ಆರಂಭದಲ್ಲಿ ಆಕೆಯ ಗುರುತು ತಿಳಿದಿರಲಿಲ್ಲ. ವಿಚಾರಣೆಯಲ್ಲಿ ಆಕೆ ಕಳೆದ ಒಂದೂವರೆ ತಿಂಗಳಿನಿಂದ ನಗರದ ವಿವಿಧ ಭಾಗಗಳಲ್ಲಿರುವ ದೇವಾಲಯಗಳ ಬಳಿ ವಾಸಿಸುತ್ತಿದ್ದಳು ಮತ್ತು ಸಿದ್ಧಾರೂಢ ಮಠದಲ್ಲಿ ಊಟ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ” ಎಂದು ಪೊಲೀಸರು ಆಯುಕ್ತರು ಹೇಳಿದರು. ಸ್ವಯಂ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಹಿಳೆಯನ್ನು ಪತ್ತೆಹಚ್ಚಿ ದೂರು ದಾಖಲಿಸಿದ್ದಾರೆ.

ಅತ್ಯಾಚಾರ ಎಸಗಿದ ಶಿವಾನಂದ್‌, ಗಣೇಶ್ ಮತ್ತು ವಿಡಿಯೋ ವೈರಲ್‌ ಮಾಡಿದ ಪ್ರದೀಪ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಮೂವರೂ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಆರೋಪಿಗಳ ಮೇಲೆ ಹಲ್ಲೆ, ತಲೆ ಬೋಳಿಸಿದ ಸಾರ್ವಜನಿಕರು

ಪ್ರಕರಣ ಸಂಬಂಧ ಶಿವಾನಂದ್ ಮತ್ತು ಗಣೇಶ್ ಅವರ ಕೈವಾಡದ ಬಗ್ಗೆ ತಿಳಿದ ನಂತರ ಅವರ ಮೇಲೆ ಹಳೆ ಹುಬ್ಬಳ್ಳಿ ಪ್ರದೇಶದ ಕೆಲವರು ಹಲ್ಲೆ ನಡೆಸಿ, ತಲೆ ಬೋಳಿಸಿದ್ದಾರೆ. ಈ ಬಗ್ಗೆ ಶಿವಾನಂದ್ ದೂರು ದಾಖಲಿಸಿದ ನಂತರ ಮತ್ತೊಂದು ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು