ರಾಜಕೀಯದಲ್ಲಿ ‘ಅಶ್ಲೀಲ ವಿಡಿಯೋ’ ಬಾಂಬ್! ಅಶೋಕ್ ಖರತ್ ಹಗರಣದ ಬೆನ್ನಲ್ಲೇ ರೂಪಾಲಿ ಚಾಕಣ್ಕರ್ ರಾಜೀನಾಮೆಗೆ ಒತ್ತಾಯ

ಮುಂಬೈ: ಮಹಾರಾಷ್ಟ್ರದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣ್ಕರ್ ಅವರ ಆಪ್ತ ಸಹಾಯಕ ಎನ್ನಲಾದ ಅಶೋಕ್ ಖರತ್ ಅವರ ಸುಮಾರು 250ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿರುವುದು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಹಗರಣದ ನೈತಿಕ ಹೊಣೆ ಹೊತ್ತು ರೂಪಾಲಿ ಚಾಕಣ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಮತ್ತು ಮಹಿಳಾ ಸಂಘಟನೆಗಳು ತೀವ್ರವಾಗಿ ಒತ್ತಾಯಿಸುತ್ತಿವೆ.

ಅಶೋಕ್ ಖರತ್ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಸುಮಾರು 250 ವಿಡಿಯೋಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಇದು ವ್ಯವಸ್ಥಿತ ಹಗರಣ ಎಂಬ ಶಂಕೆ ವ್ಯಕ್ತವಾಗಿದೆ.ಮಹಿಳೆಯರ ರಕ್ಷಣೆ ಮಾಡಬೇಕಾದ ಆಯೋಗದ ಅಧ್ಯಕ್ಷರ ಆಪ್ತವಲಯದಲ್ಲೇ ಇಂತಹ ವ್ಯಕ್ತಿ ಇರುವುದು ಆಘಾತಕಾರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಇದನ್ನೂ ಓದಿ: ಉಡುಪಿ: ತೆಂಗಿನಕಾಯಿ ಬಾಕಿ ಬಿಲ್ ವಿಚಾರ: ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ಜಗಳ: ಹಣ್ಣುಗಳು ನಾಶ

ಮಹಿಳೆಯರ ಘನತೆಯನ್ನು ಕಾಪಾಡುವಲ್ಲಿ ವಿಫಲವಾಗಿರುವ ರೂಪಾಲಿ ಚಾಕಣ್ಕರ್ ಅವರು ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ” ಎಂದು ಬಿಜೆಪಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಒತ್ತಾಯಿಸಿದ್ದಾರೆ.ಈ ಹಗರಣದ ಹಿಂದೆ ದೊಡ್ಡ ಜಾಲವಿರುವ ಸಾಧ್ಯತೆಯಿದ್ದು, ಮುಂಬೈ ಪೊಲೀಸರು ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು