Breaking News

ಭಾರತದ ಮರ್ಯಾದೆ ಹಾಳು ಮಾಡಬೇಡಿ: ಎಐ ಶೃಂಗಸಭೆಯಿಂದ ಕಾಂಗ್ರೆಸ್​​​ ಕಾರ್ಯಕರ್ತರನ್ನು ಒದ್ದು ಹೊರ ಹಾಕಿದ ಸಾರ್ವಜನಿಕರು

ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆಯ (Global AI Summit) ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಫೆಬ್ರವರಿ 20, 2026 ರಂದು ನವದೆಹಲಿಯಲ್ಲಿ ಪ್ರತಿಷ್ಠಿತ ಎಐ ಶೃಂಗಸಭೆ ನಡೆಯುತ್ತಿತ್ತು. ವಿಶ್ವದ ವಿವಿಧ ದೇಶಗಳ ತಂತ್ರಜ್ಞಾನ ನಾಯಕರು ಮತ್ತು ಗಣ್ಯರು ಭಾಗವಹಿಸಿದ್ದ ಈ ಅಂತರಾಷ್ಟ್ರೀಯ ವೇದಿಕೆಯಲ್ಲಿ, ಸುಮಾರು 10ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಅನಿರೀಕ್ಷಿತವಾಗಿ ನುಗ್ಗಿ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತರು ಸಾರ್ವಜನಿಕವಾಗಿ ತಮ್ಮ ಶರ್ಟ್ ಬಿಚ್ಚಿ, ಅರೆನಗ್ನವಾಗಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಗಳನ್ನು ವಿರೋಧಿಸಿ ಈ ಹೈಡ್ರಾಮಾ ನಡೆಸಲಾಯಿತು.ಕಾರ್ಯಕರ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು, ಕ್ಯೂಆರ್ ಕೋಡ್ (QR Code) ಮೂಲಕ ಪ್ರವಾಸಿಗರಂತೆ ಒಳಗೆ ನುಗ್ಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

Advertisement

ಇಲ್ಲಿದೆ ನೋಡಿ ವಿಡಿಯೋ

ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವರ್ಚಸ್ಸನ್ನು ಕುಗ್ಗಿಸುವ ಈ ಪ್ರಯತ್ನವನ್ನು ಕಂಡು ಅಲ್ಲಿದ್ದ ದೇಶಿ ಮತ್ತು ವಿದೇಶಿ ಪ್ರತಿನಿಧಿಗಳು ಆಶ್ಚರ್ಯಚಕಿತರಾದರು. ವರದಿಗಳ ಪ್ರಕಾರ, ಅಲ್ಲಿ ನೆರೆದಿದ್ದ ಕೆಲವು ಸಾರ್ವಜನಿಕರು ಮತ್ತು ಅತಿಥಿಗಳು ಪ್ರತಿಭಟನಾಕಾರರ ವರ್ತನೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆ ಕೂಗುತ್ತಿದ್ದವರ ಕೈಯಲ್ಲಿದ್ದ ಬಟ್ಟೆಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಪೊಲೀಸರು ಬರುವ ಮುನ್ನವೇ ಸ್ಥಳೀಯರು ಮತ್ತು ಕೆಲವು ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಅಲ್ಲಿಂದ ಹೊರದಬ್ಬಲು ಪ್ರಯತ್ನಿಸಿದರು. “ಭಾರತದ ಮರ್ಯಾದೆ ಹಾಳು ಮಾಡಬೇಡಿ” ಎಂದು ಹಲವರು ಕಿಡಿಕಾರಿದರು.

ಇದನ್ನೂ ಓದಿ: ನವದೆಹಲಿ: ಎಐ ಶೃಂಗಸಭೆಯಲ್ಲಿ ಹೈಡ್ರಾಮಾ; ಶರ್ಟ್ ಬಿಚ್ಚಿ ಪ್ರಧಾನಿ ಮೋದಿ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

ತಕ್ಷಣವೇ ಸ್ಥಳಕ್ಕೆ ಬಂದ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ಸುತ್ತುವರಿದು, ವಶಕ್ಕೆ ಪಡೆದರು. ಸದ್ಯ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಸುಮಾರು 10 ಜನರ ಮೇಲೆ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು