ಪುತ್ತೂರು: ‘ಲವ್ ಜಿಹಾದ್’ ಕರಾಳ ಮುಖವನ್ನು ತೆರೆದಿಡುವ ನೈಜ ಕಥೆ ಆಧಾರಿತ ಎನ್ನಲಾದ ‘ದಿ ಕೇರಳ ಸ್ಟೋರಿ-2’ ಚಲನಚಿತ್ರದ ಉಚಿತ ಪ್ರದರ್ಶನವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿದೆ. ‘ಸೀತಾ ಪರಿವಾರ’ ಸಂಘಟನೆಯ ವತಿಯಿಂದ ಈ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ಪ್ರದರ್ಶನದ ವಿವರಗಳು:
ದಿನಾಂಕ ಮತ್ತು ಸಮಯ: ಮಾರ್ಚ್ 05, 2026 (ಗುರುವಾರ) ಸಂಜೆ 4:00 ಗಂಟೆಗೆ.

ಸ್ಥಳ: ಭಾರತ್ ಸಿನಿಮಾಸ್, ಜಿಎಲ್ ಒನ್ ಮಾಲ್, ಪುತ್ತೂರು.
ಯಾರಿಗೆ ಅವಕಾಶ?: ಈ ಪ್ರದರ್ಶನವು ಕೇವಲ 16 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 22 ವರ್ಷಕ್ಕೆ ಒಳಪಟ್ಟ ಹಿಂದೂ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಾತ್ರ ಮೀಸಲಿರಿಸಲಾಗಿದೆ.
ಆಸನ ಸಾಮರ್ಥ್ಯ: ಸ್ಕ್ರೀನ್ 1, 2 ಮತ್ತು 3 ಸೇರಿ ಒಟ್ಟು 500 ಸೀಟುಗಳ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: “ನಟಿಯರು ಭೋಗದ ವಸ್ತು ಅಲ್ಲ”; ಸಾಮಾಜಿಕ ಜಾಲತಾಣಗಳಲ್ಲಿನ ಅಶ್ಲೀಲ ಕಮೆಂಟ್ ವಿರುದ್ಧ ಗುಡುಗಿದ ನಟಿ ಸಪ್ತಮಿ ಗೌಡ
ಪೋಸ್ಟ್ ಇಲ್ಲಿದೆ ನೋಡಿ:

ನಾರಿ ಶಕ್ತಿ – ಸಮಾಜದ ಶಕ್ತಿ’ ಎಂಬ ಧ್ಯೇಯವಾಕ್ಯದೊಂದಿಗೆ ಸೀತಾ ಪರಿವಾರವು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರೀತಿಯ ಹೆಸರಿನಲ್ಲಿ ನಡೆಯುವ ಮೋಸದ ಜಾಲದ ಬಗ್ಗೆ ಯುವತಿಯರಲ್ಲಿ ಜಾಗೃತಿ ಮೂಡಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶ ಎಂದು ಆಯೋಜಕರು ತಿಳಿಸಿದ್ದಾರೆ. ಚಿತ್ರದ ಉಚಿತ ಟಿಕೆಟ್‌ಗಳಿಗಾಗಿ ಐದು ವಿವಿಧ ಮೊಬೈಲ್ ಸಂಖ್ಯೆಗಳನ್ನು ಪೋಸ್ಟರ್‌ನಲ್ಲಿ ನೀಡಲಾಗಿದ್ದು, ವಿದ್ಯಾರ್ಥಿನಿಯರು ಮುಂಚಿತವಾಗಿ ಸಂಪರ್ಕಿಸಲು ಕೋರಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

