ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ್ಯ ಜೋಡು ಕರೆ ಕಂಬಳಕ್ಕೆ ಕ್ಷಗಣನೆ ಆರಂಭಗೊಂಡಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ 33ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳವು ಜ.24 ಮತ್ತು 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದ ಆಕರ್ಷಣೆಯಾಗಿ ಖ್ಯಾತ ಸಿನಿಮಾ ನಟ ನಟಿಯರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:AI : ರಾಜ್ಯ ಸರ್ಕಾರದಿಂದ AI ಶ್ರೇಷ್ಠತಾ ಕೇಂದ್ರಕ್ಕೆ ಅನುಮೋದನೆ
ಸಿನಿಮಾ ನಟಿಯರಾದ ಪ್ರಿಯಾಂಕ ಉಪೇಂದ್ರ, ರಕ್ಷಿತಾ ಶೆಟ್ಟಿ, ನಟರಾದ ಆದಿತ್ಯ, ಶ್ರೇಯಾನ್ ಮಂಜು, ಶನಿಲ್ ಗುರು, ಜೆ.ಪಿ.ತುಮಿನಾಡು, ಪ್ರಕಾಶ್ ತುಮಿನಾಡು, ಧರ್ಮ ಕೀರ್ತಿ ರಾಜ್ ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮೊದಲಾದ ಅನೇಕ ನಟ ನಟಿಯರು ಭಾಗವಹಿಸಿ ಮನರಂಜನೆ ನೀಡಲಿದ್ದಾರೆ ಎಂದು ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ರವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

