Breaking News

ಶ್ರೀ ಸರಸ್ವತಿ ಸೌಹಾರ್ದ ಸಂಘದ ಅಧ್ಯಕ್ಷರಾಗಿ ಸಹಕಾರ ರತ್ನ ಸತೀಶ್ಚಂದ್ರ, ಉಪಾಧ್ಯಕ್ಷರಾಗಿ ಉಮೇಶ್‌ ಪ್ರಭು ಪುನರಾಯ್ಕೆ

ಪುತ್ತೂರು, ಫೆ.5: ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 2026-2031ರ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆದಿದೆ. ಸಹಕಾರ ರತ್ನ  ಎಸ್‌ ಆರ್‌ ಸತೀಶ್ಚಂದ್ರ ಇವರು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಳ್ಯ ನೆಲ್ಲೂರು ಕೆಮ್ರಾಜೆಯ ಶ್ರೀ ಉಮೇಶ್‌ ಪ್ರಭು ಕೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳೂರು ತಾಲೂಕು ಉಲ್ಲಾಳದ ಶ್ರೀ ದಯಾನಂದ ನಾಯಕ್‌ ಕೆ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ಶ್ರೀ ರವೀಶ ಪಿ, ಪುತ್ತೂರು ತಾಲೂಕು ಇರ್ದೆ ಗ್ರಾಮದ ಶ್ರೀ ರಾಜಗೋಪಾಲ ಬಿ, ಪುತ್ತೂರು ತಾಲೂಕು ನೆಹರು ನಗರದ ಶ್ರೀ ವಸಂತ ಶಂಕರ್‌, ಬೆಂಗಳೂರಿನ ಮಾಚೋಹಳ್ಳಿಯ ಶ್ರೀ ವೇದವ್ಯಾಸ ಕೆ, ಸುಳ್ಯ ತಾಲೂಕು ಸೋಣಂಗೇರಿಯ ಶ್ರೀ ಸಂಜೀವ ನಾಯಕ್‌, ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ಶ್ರೀ ಕೆ ಹರೀಶ್‌ ಬೋರ್ಕರ್‌, ಪುತ್ತೂರಿನ ಆರ್ಯಾಪು ಗ್ರಾಮದ ಶ್ರೀಮತಿ ದೇವಕಿ ಕೆ, ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಶ್ರೀಮತಿ ರಂಜಿತ ಆರ್‌ ಪ್ರಭು ಇವರು ಆಯ್ಕೆಯಾಗಿದ್ದಾರೆ.

Advertisement

ಇದನ್ನೂ ಓದಿ: ಫೆ.21| ಶ್ರೀವರ ಯುವಕ ಮಂಡಲದಿಂದ ದ.ಕ., ಉಡುಪಿ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ

ರಾಜ್ಯಾದ್ಯಂತ ಪ್ರಸ್ತುತ 20 ಶಾಖೆಗಳನ್ನು ಈ ಸಹಕಾರಿ ಸಂಘ ಹೊಂದಿದೆ. ಸಂಘವು ₹403 ಕೋಟಿ ಠೇವಣಿ ಮತ್ತು ₹380 ಕೋಟಿ ಸಾಲದ ಮೊತ್ತವನ್ನು ಹೊಂದಿದ್ದು, 52,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಜತೆಗೆ ಚಿನ್ನಾಭರಣ ಸಾಲ, ಗೃಹ ಸಾಲ, ವಾಹನ ಸಾಲ, ಲಾಕರ್‌ ಸೌಲಭ್ಯ ಹಾಗೂ ವಿಮಾ ಸೌಲಭ್ಯಗಳನ್ನು ನೀಡುತ್ತಿದೆ. ತನ್ನ ಪೂರಕ ಸಂಸ್ಥೆಯಾದ ‘ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌’ ಮೂಲಕ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ರಿಟರ್ನಿಂಗ್ ಅಧಿಕಾರಿಯಾಗಿ ಶ್ರೀಮತಿ ತ್ರಿವೇಣಿ ಹಾಗೂ ಸಹಾಯಕರಾಗಿ ಶ್ರೀ ನಾಗೇಂದ್ರ ಅವರು ಸಹಕರಿಸಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು