ರಾಮಕುಂಜ, ಫೆ.11: ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ, ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿಪೂಜೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಇಂದು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ರಾಮಕುಂಜ ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರವನ್ನು ನೀಡುವ ಕಾರ್ಯಕ್ರಮ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಲಾಗಿದೆ ಎಂದರು.
ಐದು ವರ್ಷದ ಅವಧಿಯಲ್ಲಿ ಗ್ರಾಮ ಪಂಚಾಯಿತಿನಲ್ಲಿ ಬಹಳಷ್ಟು ಕಾಮಗಾರಿಗಳು ಆಗಿವೆ. ನಿವೇಶನ ಇಲ್ಲದವರಿಗೆ ನಿವೇಶನ ಕೊಡಿಸಬೇಕು ಎನ್ನುವ ನಿಟ್ಟಿನಲ್ಲಿ ಬಹಳ ವರ್ಷಗಳಿಂದ ಪ್ರಯತ್ನ ಪಟ್ಟು ಆಗದ ಕೆಲಸವನ್ನು ಈ ವರ್ಷದ ಅವಧಿಯ ಪಂಚಾಯತಿನ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಒಂದು ಮುತ್ತುವರ್ಜಿಯಿಂದ ಇಂದು ಅದನ್ನು ಕೊಡಿಸುವಂತಹ ಒಂದು ಸೌಭಾಗ್ಯ ಸಿಕ್ಕಿದೆ ಎಂದರು.


ಹಕ್ಕು ಪತ್ರ ಸಿಗುವಂತಹ ಒಂದು ಅವಕಾಶ ಆಗಿದೆ. ಅದಕ್ಕೆ ನೀವು ಭಾಗ್ಯವಂತರು. ಈ ಸಂದರ್ಭದಲ್ಲಿ ಹಕ್ಕು ಪತ್ರ ಮನೆ ಅವನ ಮನೆ ಇದ್ದರೂ ಕೂಡ ಹಕ್ಕು ಪತ್ರ ಕೊಡಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ನಾವಿರುವಾಗ, ನಿಮಗೆ ಇದನ್ನು ದೊರಕಿಸಿಕೊಟ್ಟಂತಹ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಇಒ ಅವರು ತಾಲೂಕು ಪಂಚಾಯತ್ ಇಒ ಮತ್ತು ತಹಶೀಲ್ದಾರ್ ಅವರ ಕಚೇರಿಯವರು ಕೂಡ ಇದಕ್ಕೆ ಶ್ರಮವನ್ನು ವಹಿಸಿದ್ದಾರೆ ಎಂದರು.

ಈ ಗ್ರಾಮ ಪಂಚಾಯತ್ ಐದು ವರ್ಷದ ಅವಧಿಯಲ್ಲಿ ಒಳ್ಳೆಯ ಆಡಳಿತವನ್ನು ನೀಡಿದೆ. ಯಾವುದೇ ಒಂದು ಗ್ರಾಮ ಅಭಿವೃದ್ಧಿ ಆಗಬೇಕಿದ್ದರೆ, ಅಲ್ಲಿ ರಾಜಕೀಯ ಇರಬಾರದು. ರಾಜಕೀಯ ಮಾಡಿದರೆ ಆ ಗ್ರಾಮ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಅಲ್ಲಿ ರಾಜಕೀಯವನ್ನು ಬಿಟ್ಟು ನಾವೆಲ್ಲರೂ ಒಟ್ಟಾಗಿ ನಮ್ಮ ಗ್ರಾಮ ಅಭಿವೃದ್ಧಿ ಆಗಬೇಕು. ಒಳ್ಳೆಯ ಕೆಲಸವನ್ನು ಈ ಪಂಚಾಯಿತಿನಲ್ಲಿ ಪಂಚಾಯಿತಿ ಸದಸ್ಯರಿಗೆ ಅಧಿಕಾರಿಗಳಿಗೆ ಸಾತ್ ಕೊಟ್ಟು ಗ್ರಾಮಸ್ಥರು ಕೂಡ ಕೆಲಸ ಮಾಡಿದ ಕಾರಣ ಇಂದು ಇಷ್ಟು ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ: ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಒಟ್ಟು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮುಂದೆ ಕೂಡ ಚಿಂತನೆ ಮಾಡಿಕೊಂಡು ಕೆಲಸವನ್ನು ಮಾಡುವ ಅಂತ ಹೇಳುತ್ತಾ ಈಗಾಗಲೇ ನಾನು ಈ ಭಾಗದ ನನ್ನ ಅನುದಾನದಲ್ಲಿ ೨೫ ಲಕ್ಷ ಅನುದಾನ ರಸ್ತೆಗಿಟ್ಟು ಇವತ್ತು ಗುದ್ದಲಿ ಪೂಜೆಯನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಕೂಡ ನಿಮ್ಮ ಬೇಡಿಕೆಗಳಿಗೆ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಸರಕಾರದಿಂದ ಬಂದ ಅನುದಾನವನ್ನು ಎಲ್ಲಾ ಗ್ರಾಮಗಳಿಗೆ ಹಂಚಿಕೆ ಮಾಡುವಾಗ ಒಂದಷ್ಟು ಗ್ರಾಮಗಳಲ್ಲಿ ಒಂದಷ್ಟು ರಸ್ತೆಗಳು ಬಿಟ್ಟು ಹೋಗಬಹುದು. ಅದು ಮುಂದಿನ ಯೋಜನೆಯಲ್ಲಿ ಜೋಡಿಸಿಕೊಂಡು ಅಭಿವೃದ್ಧಿ ಕೆಲಸವನ್ನು ಮಾಡಲಾಗುವುದು. ಎಲ್ಲರ ಸಹಕಾರದೊಂದಿಗೆ ಈ ಗ್ರಾಮ ಅಭಿವೃದ್ಧಿಯಾಗಿ ಮಾದರಿ ಗ್ರಾಮವಾಗಿ ಹೊರಹೊಮ್ಮಲಿ ಎಂದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

