ಬೆಂಗಳೂರು: ಬಾಹ್ಯಾಕಾಶದಲ್ಲಿ ಅನೇಕ ಅಚ್ಚರಿಗಳು ಘಟಿಸುತ್ತಲೇ ಇರುತ್ತದೆ. ಅಂತೆಯೇ ಇದೇ ಮಾ.3 ರಂದು ವರ್ಷದ ಮೊದಲ ಚಂದ್ರಗ್ರಣ ಸಂಭವಿಸಲಿದೆ. ಅದು ಕೂಡ ಹೋಳಿ ಹಬ್ಬದ ದಿನದಂದೇ ಎಂಬುದು ವಿಶೇಷ. ಅದೂ ಅಲ್ಲದೆ 100 ವರ್ಷಗಳ ನಂತರ ಈ ರೀತಿ ಆಗುತ್ತಿರುವುದು ಮತ್ತೊಂದು ವಿಶೇಷ.
ಈ ದಿನ ಚಂದ್ರನು ಕೆಂಪು ಮಿಶ್ರಿತ ತಾಮ್ರದ ಬಣ್ಣಕ್ಕೆ ತಿರುಗಲಿದ್ದು, ಇದನ್ನು ವಿಜ್ಞಾನಿಗಳು ‘ಬ್ಲಡ್ ಮೂನ್’ ಎಂದು ಕರೆಯುತ್ತಾರೆ.

ಇದನ್ನೂ ಓದಿ: ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ! ನಟಿ ಜೊತೆ ಅನೈತಿಕ ಸಂಬಂಧ ಆರೋಪ
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಸಮಯದಲ್ಲಿ ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಬೆಳಕು ಚದುರಿ, ಕೇವಲ ಕೆಂಪು ಬಣ್ಣದ ಕಿರಣಗಳು ಚಂದ್ರನ ಮೇಲೆ ಬೀಳುತ್ತವೆ. ಇದರಿಂದ ಚಂದ್ರನು ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತಾನೆ.
ಗ್ರಹಣ ಸಮಯ:
ಗ್ರಹಣ ಆರಂಭ: ಮಧ್ಯಾಹ್ನ 3:20ಕ್ಕೆ
ಪೂರ್ಣ ಗ್ರಹಣ ಆರಂಭ: ಸಂಜೆ 4:34ಕ್ಕೆ
ಗರಿಷ್ಠ ಹಂತ: ಸಂಜೆ 5:10 ರಿಂದ 5:25 ರವರೆಗೆ
ಪೂರ್ಣ ಗ್ರಹಣ ಅಂತ್ಯ: ಸಂಜೆ 5:33ಕ್ಕೆ
ಗ್ರಹಣದ ಸಂಪೂರ್ಣ ಮುಕ್ತಾಯ: ಸಂಜೆ 6.48ಕ್ಕೆ
ಭಾರತದಲ್ಲಿ ಎಲ್ಲೆಲ್ಲಿ ಕಾಣಬಹುದು?:
ಈಶಾನ್ಯ ಭಾರತ: ಗುವಾಹಟಿ, ದಿಬ್ರುಗಥ್, ಇಟಾನಗರ ಮತ್ತು ಶಿಲ್ಲಾಂಗ್‌ನಲ್ಲಿ ಚಂದ್ರನು ಕೆಂಪು ಬಣ್ಣದಲ್ಲೇ ಉದಯಿಸುವುದರಿಂದ ಇಲ್ಲಿ ಅತ್ಯಂತ ಸುಂದರ ನೋಟ ಸಿಗಲಿದೆ.
ಪೂರ್ವ ಭಾರತ: ಕೋಲ್ಕತ್ತಾ, ಭುವನೇಶ್ವರ ಮತ್ತು ಪಾಟ್ನಾದಲ್ಲಿ ಪೂರ್ಣ ಗ್ರಹಣದ ಅಂತ್ಯದ ದೃಶ್ಯ ಕಾಣಬಹುದು.
ದಕ್ಷಿಣ ಮತ್ತು ಪಶ್ಚಿಮ ಭಾರತ: ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್ ಮತ್ತು ಮುಂಬೈನಲ್ಲಿ ಚಂದ್ರೋದಯದ ನಂತರ ಗ್ರಹಣದ ಅಂತಿಮ ಭಾಗ (ಪಾರ್ಶ್ವ ಗ್ರಹಣ) ಸುಮಾರು 15 ರಿಂದ 25 ನಿಮಿಷಗಳ ಕಾಲ ಕಾಣಸಿಗಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

