Breaking News

ವಿಜಯ್ ಜೊತೆಗಿನ ಮೊದಲ ಕಿಸ್ ಅನುಭವ ಹಂಚಿಕೊಂಡ ರಶ್ಮಿಕಾ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಗೆ ಭರ್ಜರಿ ಸಿದ್ದತೆಗಳು ನಡೆಯುತ್ತಿದೆ. ಇದರ ನಡುವೆಯೇ, ವಿಜಯ್ ಜೊತೆಗಿನ ತಮ್ಮ ಮೊದಲ ಕಿಸ್ಸಿಂಗ್ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ನೂರಾರು ಜನರ ಮುಂದೆ ಕಿಸ್ ಮಾಡಲು ಆರಂಭದಲ್ಲಿ ಮುಜುಗರವಾದರೂ, ವಿಜಯ್ ಅವರ ಸಹಕಾರದಿಂದ ಆ ದೃಶ್ಯವನ್ನು ಸುಲಭವಾಗಿ ಮಾಡಿದೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೆಲವು ವರ್ಷಗಳಿಂದ ಸಂಬಂಧದಲ್ಲಿ ಇದ್ದರು. ಮದುವೆಯ ವಿಚಾರವನ್ನು ಕೊನೆಯವರೆಗೂ ಗುಟ್ಟಾಗಿಯೇ ಇಟ್ಟಿದ್ದರು.

Advertisement

ಇದನ್ನೂ ಓದಿ: ಪುತ್ತೂರು: ಫೆ.26 ರಂದು ವಿದ್ಯುತ್ ವ್ಯತ್ಯಯ

ಇದೀಗ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೊತೆಗೆ ತಮ್ಮ ಮೊದಲ ಕಿಸ್ಸಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಆನ್‌ಸ್ಕ್ರೀನ್ ಕಿಸ್ಸಿಂಗ್, ಅಂದರೆ ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್ ಜೊತೆಗೆ ಕಿಸ್ ಮಾಡಿದಾಗ ಏನಾಯ್ತು ಎಂದು ವಿವರಿಸಿದ್ದಾರೆ. ಅದರ ಸಂದರ್ಶನದ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

2018 ರಲ್ಲಿ ಬಿಡುಗಡೆಯಾದ ಗೀತ‌ ಗೋವಿಂದಂ ಚಿತ್ರದಲ್ಲಿ ಇವರು ಗಂಡ‌ ಹೆಂಡತಿ ಪಾತ್ರಮಾಡಿದ್ದರು. ಆ ಸಮಯದಲ್ಲಿ ಅಲ್ಲಿದ್ದ 200 ಮಂದಿಯ ಎದುರು ಮೊದಲ ಬಾರಿಗೆ ವಿಜಯ್ ಅವರನ್ನು ಮುತ್ತಿಕ್ಕಬೇಕಾದರೆ ಎಷ್ಟು ಕಷ್ಟ ಆಯಿತು ಎಂದು  ಹೇಳಿಕೊಂಡಿದ್ದಾರೆ.

ನನಗೆ ಇದರ ಅನುಭವ ಇರಲಿಲ್ಲ. ಆರಂಭದಲ್ಲಿ ಆಘಾತಕಾರಿಯಾಗಿತ್ತು. ಅದೇ ವೇಳೆ ಯಾರೊಂದಿಗೆ ಆ ದೃಶ್ಯವನ್ನು ಮಾಡುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ಆ ಕಡೆ ಇದ್ದವರಿಗೂ ಇದೇ ರೀತಿಯ ಮುಜುಗರ ಆಗುತ್ತಿರುತ್ತದೆ. ಆದ್ದರಿಂದ ಅವರು ನಮಗೆ ಕಂಫರ್ಟ್ ಎನ್ನಿಸಿದರೆ ಇಂಥ ದೃಶ್ಯ ಮಾಡಲು ಸುಲಭವಾಗುತ್ತದೆ.

ಸಿನಿಮಾಕ್ಕೆ ಅಗತ್ಯ ಬಿದ್ದರೆ ಇಂಥ ದೃಶ್ಯಗಳನ್ನು ಬೇಡ ಎನ್ನಲು ಆಗುವುದಿಲ್ಲ. ಈ ಸಿನಿಮಾದಲ್ಲಿ ನಮ್ಮದು ಪತಿ-ಪತ್ನಿ ರೋಲ್, ಮದುವೆಯಾದ ಮೇಲೆ ದಂಪತಿ ಎಲ್ಲವನ್ನೂ ಮಾಡಬೇಕಾಗುತ್ತದೆ. ಆದ್ದರಿಂದ ಕಿಸ್ ಮಾಡುವುದು ಅನಿವಾರ್ಯವಾಗಿತ್ತು. ವಿಜಯ್ ಅವರು ಕೂಡ ತುಂಬಾ ಸಹಕರಿಸಿದ್ದರಿಂದ ಈಸಿಯಾಗಿ ಕಿಸ್ ಮಾಡಿದೆ ಎಂದಿದ್ದಾರೆ ರಶ್ಮಿಕಾ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು