Breaking News

ನಗು ಚೆಲ್ಲುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ: ವಿಜಯ್ ದೇವರಕೊಂಡ ಕುಟುಂಬದಿಂದ ಅದ್ಧೂರಿ ಸ್ವಾಗತ!

ದಕ್ಷಿಣ ಭಾರತದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ಈಗ ಕಾಲಿವುಡ್, ಟಾಲಿವುಡ್ ಸೇರಿದಂತೆ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ರಾಜಸ್ಥಾನದ ಉದಯಪುರದಲ್ಲಿ (Udaipur) ಅತ್ಯಂತ ಖಾಸಗಿಯಾಗಿ ನಡೆದಿದೆ. ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಮದುವೆಯ ನಂತರ ಉದಯಪುರ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ವಾಪಸ್ಸಾಗುವಾಗ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ರಶ್ಮಿಕಾ ಅವರು ಸರಳವಾದ ಆದರೆ ಸುಂದರವಾದ ಉಡುಪಿನಲ್ಲಿ ಹಸನ್ಮುಖಿಯಾಗಿ ಕಾಣಿಸಿಕೊಂಡರೆ, ವಿಜಯ್ ದೇವರಕೊಂಡ ಅವರು ಕ್ಯಾಶುವಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮದುವೆಯ ನಂತರ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಇವರನ್ನು ನೋಡಿ ಅಭಿಮಾನಿಗಳು “ಪವರ್ ಕಪಲ್” ಎಂದು ಕರೆಯುತ್ತಾ ಶುಭ ಹಾರೈಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ನವಜೋಡಿಗೆ ಶುಭ ಹಾರೈಸಿದ್ದಾರೆ.

Advertisement

ಇದನ್ನೂ ಓದಿ: ರಾಕಿ ಭಾಯ್ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್: ಮಾ. 2ಕ್ಕೆ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ‘ತಬಾಹಿ’ ಬಿಡುಗಡೆ!

ಗೃಹಪ್ರವೇಶದ ಸಮಯದಲ್ಲಿ ರಶ್ಮಿಕಾ ಅವರು ಕೆಂಪು ಬಣ್ಣದ ಸಾಂಪ್ರದಾಯಿಕ ರೇಷ್ಮೆ ಸೀರೆಯುಟ್ಟು, ಕೈಯಲ್ಲಿ ಬಳೆ, ಹಣೆಯಲ್ಲಿ ಕುಂಕುಮ ಧರಿಸಿ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದರು. ಅವರ ಮುಖದಲ್ಲಿನ ಆ ನಗು ಅಭಿಮಾನಿಗಳ ಮನ ಗೆದ್ದಿದೆ.ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರು ಸೊಸೆ ರಶ್ಮಿಕಾ ಅವರಿಗೆ ಆರತಿ ಬೆಳಗಿ, ಸಾಂಪ್ರದಾಯಿಕವಾಗಿ ಮನೆಗೆ ಬರಮಾಡಿಕೊಂಡರು. ಈ ವೇಳೆ ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು