ವಡೋದರ: ಗೆಲ್ಲಲೇ ಬೇಕಿದ್ದ ಕೊನೆಯ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ 8 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯಿತು. ಈ ಬಾರಿಯ ಪಂದ್ಯಾವಳಿಯಲ್ಲಿ ಫೈನಲ್ಲಿಗೇರಿದ ಮೊದಲ ತಂಡ ಆರ್‌ಸಿಬಿ.
ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಯುಪಿ ತಂಡಕ್ಕೆ ಆರಂಭಿಕ ಜೋಡಿ ಮೆಗ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮಾ ಉತ್ತಮ ಆರಂಭ ಒದಗಿಸಿದರು. ನಾಯಕಿ ಮ್ಯಾಗ್ ಲೆನಿಂಗ್ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 41 ರನ್ ಗಳಿಸಿ ನಡಿನಿ ಡಿ ಕ್ಲರ್ಕ್ ಅವರಿಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: T20 Worldcup: ನೀವು ಆಡದಿದ್ರೆ ನಾವು ರೆಡಿ, ಪಾಕಿಸ್ತಾನ ಕಾಲೆಳೆದ ಐಸ್ಲೆಂಡ್
ದೀಪ್ತಿ ಶರ್ಮಾ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 55 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಹರ್ಲಿನ್ ಡಿಯೋನ್ 14, ಶಿಮ್ರನ್ ಶೇಕ್ 10 ಬಿಟ್ಟರೆ ಬೇರೆ ಯಾರೂ ಕೂಡ ಎರಡಂಕಿ ದಾಟಲಿಲ್ಲ. 20 ಓವರ್‌ಗಳಲ್ಲಿ ಯುಪಿ ತಂಡ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ನಡಿನಿ ಡಿ ಕ್ಲರ್ಕ್ 4 ವಿಕೆಟ್, ಗ್ರೇಸ್ ಹ್ಯಾರಿಸ್ 2 ವಿಕೆಟ್, ಲಾರಾ ಬೆಲ್ ಮತ್ತು ಶ್ರೇಯಾಂಕಾ ಪಾಟಿಲ್ ತಲಾ ಒಂದು ವಿಕೆಟ್ ಪಡೆದರು.

ನಂತರ ಬ್ಯಾಟಿಂಗ್ ಗೆ ಬಂದ ಆರ್ಸಿಬಿ ತಂಡದ ಆರಂಭಿಕ ಜೋಡಿ ಗ್ರೇಸ್ ಹ್ಯಾರಿಸ್ ಮತ್ತು ನಾಯಕಿ ಸ್ಮೃತಿ ಮಂದಾನ ಸ್ಪೋಟಕ ಆರಂಭ ಒದಗಿಸಿದರು. ಅದರಲ್ಲೂ ಗ್ರೇಸ್ ಹ್ಯಾರಿಸ್ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿ 37 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ನೊಂದಿಗೆ 75 ರನ್ ಗಳಿಸಿದರು. ಸ್ಮೃತಿ 27 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ನೊಂದಿಗೆ ಅಜೇಯ 54 ರನ್ ಗಳಿಸಿ ತಂಡದ ಗೆಲುವಿಗೆ ಪಾತ್ರರಾದರು. ಯುಪಿ ಪರ ಶಿಕಾ ಪಾಂಡೆ ಮತ್ತು ಆಶಾ ಶೋಬಾನ ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಎರಡನೇ ಬಾರಿಗೆ ಪೈನಲ್ ಪ್ರವೇಶಿಸಿತು. ಹಾಗೆಯೇ ಯುಪಿ ತಂಡ ಕೂಡ ಈ ಟೂರ್ನಯಿಂದ ಹೊರ ಬಿದ್ದಂತೆ ಆಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

