ರಣಬೀರ್ ಕಪೂರ್ ಸಿನಿಮಾ ಸ್ಟೈಲ್‌ನಲ್ಲಿ ಹೊಸ ಉದ್ಯೋಗ!; ಜನರ ಬ್ರೇಕ್‌ಅಪ್ ಮಾಡಿಸೋದ್ದಕ್ಕೆ ಸಿಗಲಿದೆ ಅಧಿಕೃತ ಸಂಬಳ ಮತ್ತು ಹುದ್ದೆ

ಮನೆಯಲ್ಲಿ ಪ್ಲಂಬಿಂಗ್ ಸಮಸ್ಯೆಯಾದರೆ ಪ್ಲಂಬರ್ ಕರೆಯುತ್ತೇವೆ, ವೈ-ಫೈ ಕೈಕೊಟ್ಟರೆ ಇಂಟರ್ನೆಟ್ ಎಕ್ಸ್‌ಪರ್ಟ್‌ಗೆ ಫೋನ್ ಮಾಡುತ್ತೇವೆ. ಆದರೆ, ಈಗ ಪ್ರೀತಿಯಲ್ಲಿ ಬ್ರೇಕ್‌ಅಪ್ ಮಾಡಿಕೊಳ್ಳಬೇಕಾದರೂ ಒಬ್ಬ ಎಕ್ಸ್‌ಪರ್ಟ್ ಸಿಗಲಿದ್ದಾರೆ! ಹೌದು, ಸಂಬಂಧಗಳನ್ನು ವೃತ್ತಿಪರವಾಗಿ ಮತ್ತು ಸುಲಭವಾಗಿ ಕೊನೆಗೊಳಿಸಲು ಜನರಿಗೆ ಸಹಾಯ ಮಾಡುವ ಅಧಿಕೃತ ಉದ್ಯೋಗವೊಂದನ್ನು ಜಾಗತಿಕ ಡೇಟಿಂಗ್ ಪ್ಲಾಟ್‌ಫಾರ್ಮ್ ಆದ ‘Dating.com’ ಘೋಷಿಸಿದೆ.

ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದ್ದ ಈ ವಿಚಿತ್ರ ಉದ್ಯೋಗಕ್ಕೆ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಮನ್ನಣೆ ಮತ್ತು ಬೇಡಿಕೆ ಸಿಗುತ್ತಿದೆ.

Advertisement

ಏನಿದು ‘ಚೀಫ್ ಬ್ರೇಕ್‌ಅಪ್ ಆಫೀಸರ್’ (CBO) ಹುದ್ದೆ?:

Dating.com ಸಂಸ್ಥೆಯು ಈ ವಿಶಿಷ್ಟ ಹುದ್ದೆಗೆ ‘ಚೀಫ್ ಬ್ರೇಕ್‌ಅಪ್ ಆಫೀಸರ್’ (Chief Breakup Officer – CBO) ಎಂಬ ಅಧಿಕೃತ ನಾಮಕರಣ ಮಾಡಿದೆ. ಕಳೆದ ವರ್ಷ ಬೆಂಗಳೂರು ಮೂಲದ ಕಂಪನಿಯೊಂದು ‘ಚೀಫ್ ಡೇಟಿಂಗ್ ಆಫೀಸರ್’ ಎಂಬ ವಿಲಕ್ಷಣ ಹುದ್ದೆಯನ್ನು ಪರಿಚಯಿಸಿ ಸುದ್ದಿಯಾಗಿತ್ತು. ಆದರೆ, ಈ ಹೊಸ ಉದ್ಯೋಗವು ಕೇವಲ ಜನರ ಬ್ರೇಕ್‌ಅಪ್ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ಆ ನೋವಿನಿಂದ ಅವರು ಹೊರಬರಲು ಸಹಾಯ ಮಾಡುವತ್ತ ಮಾತ್ರ ಸಂಪೂರ್ಣ ಗಮನ ಹರಿಸುತ್ತದೆ.

ಇದನ್ನೂ ಓದಿ:Lifestyle: ತಿನ್ನುವಾಗ ಮೊಬೈಲ್‌ ಬಳಸಿದರೆ ಬರಬಹುದು ಈ ರೋಗಗಳು! ಇರಲಿ ಎಚ್ಚರ

ಹುದ್ದೆಗೆ ಬೇಕಾದ ಅರ್ಹತೆಗಳೇನು?:

ಈ ಹುದ್ದೆಯನ್ನು ಅಲಂಕರಿಸುವ ವ್ಯಕ್ತಿಗೆ ಪ್ರೀತಿ, ಪ್ರೇಮ ಮತ್ತು ಇಂದಿನ ಆಧುನಿಕ ಡೇಟಿಂಗ್ ಜಗತ್ತಿನ ಬಗ್ಗೆ ಆಳವಾದ ಜ್ಞಾನವಿರಬೇಕಾಗುತ್ತದೆ. ಪ್ರಮುಖವಾಗಿ ಕೆಳಗಿನ ಅರ್ಹತೆಗಳನ್ನು ಸಂಸ್ಥೆ ನಿರೀಕ್ಷಿಸುತ್ತಿದೆ:

ಅಸಾಧಾರಣ ಭಾವನಾತ್ಮಕ ಬುದ್ಧಿವಂತಿಕೆ : ಕ್ಲೈಂಟ್‌ಗಳ ನೋವು ಮತ್ತು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮನಸ್ಸಿರಬೇಕು.

ಉತ್ತಮ ಸಂವಹನ ಕೌಶಲ್ಯ : ಸಂಬಂಧ ಮುರಿಯುವಾಗ ಯಾವುದೇ ಜಗಳ, ಗಲಾಟೆ ಆಗದಂತೆ ಅತ್ಯಂತ ವೃತ್ತಿಪರವಾಗಿ ಮತ್ತು ಶಾಂತಿಯುತವಾಗಿ ಸಂಭಾಷಣೆ ನಡೆಸುವ ಕಲೆ ತಿಳಿದಿರಬೇಕು.

ಆಧುನಿಕ ಡೇಟಿಂಗ್ ತಿಳುವಳಿಕೆ: ಇಂದಿನ ಯುವ ಪೀಳಿಗೆಯ ಸಂಬಂಧಗಳು ಮತ್ತು ಪ್ರೇಮ ವೈಫಲ್ಯಗಳ ಹಿಂದಿನ ಮಾನಸಿಕತೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕು.

ಒಟ್ಟಾರೆಯಾಗಿ, ಸಂಬಂಧಗಳನ್ನು ಕಹಿ ಇಲ್ಲದೆ ಮಧುರವಾಗಿಯೇ ಕೊನೆಗೊಳಿಸಲು ಮಾರ್ಗದರ್ಶನ ನೀಡುವುದೇ ಈ ಚೀಫ್ ಬ್ರೇಕ್‌ಅಪ್ ಆಫೀಸರ್‌ನ ಪ್ರಮುಖ ಜವಾಬ್ದಾರಿಯಾಗಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *