ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ‘ಲೈಕ್ಸ್’ ಮತ್ತು ‘ವ್ಯೂಸ್’ ಪಡೆಯಲು ಯುವಜನತೆ ಎಂತಹ ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನಲ್ಲಿ ನಡೆದ ಈ ಘಟನೆ. ಹೆಚ್ಚು ಫಾಲೋವರ್ಸ್ ಪಡೆಯುವ ಉದ್ದೇಶದಿಂದ ಯುವತಿಯೊಬ್ಬಳು ತನ್ನ ತಂದೆಯನ್ನು ಗೋಣಿ ಚೀಲದಲ್ಲಿ ಕೂರಿಸಿ, ಅದನ್ನು ಕೊರಿಯರ್ ಆಫೀಸ್ಗೆ ಕಳುಹಿಸುವ ನಾಟಕವಾಡಿ ರೀಲ್ಸ್ ಮಾಡಲು ಯತ್ನಿಸಿದ್ದಾಳೆ.
ಯುವತಿಯು ತನ್ನ ತಂದೆಯನ್ನು ಚೀಲದೊಳಗೆ ಕುಳ್ಳಿರಿಸಿ, ಅದನ್ನು ಪ್ಯಾಕ್ ಮಾಡಿ ಕೊರಿಯರ್ ಮೂಲಕ ಕಳುಹಿಸುತ್ತಿದ್ದೇನೆ ಎಂಬಂತೆ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದಾಳೆ. ವಿಶೇಷವೆಂದರೆ, ಮಗಳ ಈ ರೀಲ್ಸ್ ಹುಚ್ಚಿಗೆ ತಂದೆಯೂ ಸಹಕರಿಸಿ ಚೀಲದೊಳಗೆ ಕುಳಿತುಕೊಂಡಿದ್ದಾರೆ.

ಇದನ್ನೂ ಓದಿ: ರೀಲ್ಸ್ ಹುಚ್ಚಿಗೆ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್ಫೈರ್; ಯುವಕನ ದುರಂತ ಅಂತ್ಯ!
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರಚಾರಕ್ಕಾಗಿ ಹೆತ್ತವರನ್ನು ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ” ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಈ ಘಟನೆಯು ಡಿಜಿಟಲ್ ಲೋಕದ ವ್ಯಸನವು ಕೌಟುಂಬಿಕ ಮೌಲ್ಯಗಳನ್ನು ಹೇಗೆ ಬಲಿ ಪಡೆಯುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

