ಕುಮುಟಾ: ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಬಗ್ಗೆ ಬಹಳಷ್ಟು ಚರ್ಚೆಗಳು ಆಗುತ್ತಿದೆ. ಆದರೆ ಸಿಎಂ ಬದಲಾವಣೆ ವಿಚಾರ ಹೈ ಕಮಾಂಡ್‌ಗೆ ಬಿಟ್ಟದ್ದು ಎಂದು ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇದನ್ನು ಓದಿ: T20 Worldcup: ಬ್ಯಾಟರ್‌ಗಳ ಅಬ್ಬರ, ವಿಂಡೀಸ್‌ಗೆ ರೋಚಕ ಜಯ

ಕುಮಟಾದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದಲಿತ ಸಿ.ಎಂ ಬಗ್ಗೆ ಬಹಳ ಆಕಾಂಕ್ಷಿಗಳಿದ್ದಾರೆ. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಈಗ ಮುಖ್ಯಮಂತ್ರಿ ಇದ್ದಾರೆ; ಮುಂದಿನ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು” ಎಂದು ಹೇಳಿದರು.
ತಮ್ಮ ಹೆಸರು ಸಿ.ಎಂ ರೇಸಿನಲ್ಲಿ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಂತಹ ಯಾವುದೂ ಇಲ್ಲ ನಾನು ಈಗ ಆರಾಮವಾಗಿದ್ದೇನೆ,” ಎಂದು ನಗುತ್ತಲೇ ಉತ್ತರಿಸಿದರು.
ಸಿ.ಎಂ ಪಟ್ಟಭದ್ರ ಹಿತಾಸಕ್ತಿಯವರು ‘ನನ್ನ ಸಿ.ಎಂ ಸಹಿಸಲಾರರು’ ಎಂಬ ಟ್ವಿಟ್ ಕುರಿತು ಕೇಳಿದ ಪ್ರಶ್ನೆಗೆ, “ಟ್ವಿಟ್ ಮಾಡಿದ್ದು ಯಾರು ಎಂಬುದೇ ಗೊತ್ತಿಲ್ಲ. ಅದು ಪಕ್ಷದವರಿಗಾ, ವಿರೋಧ ಪಕ್ಷದವರಿಗಾ ತಿಳಿದಿಲ್ಲ” ಎಂದರು.
ಪಕ್ಷ, ಸರ್ಕಾರ ಮತ್ತು ಕಾರ್ಯಕರ್ತರ ಮಟ್ಟದಲ್ಲಿ ಸಿ.ಎಂ ಬದಲಾವಣೆ ಕುರಿತು ಗೊಂದಲ ಇದೆ ಎಂಬ ಪ್ರಶ್ನೆಗೆ, “ಅದಕ್ಕೆ ಬ್ರೇಕ್ ಹಾಕಬೇಕಾಗಿದೆ. ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ,” ಎಂದು ಪುನರುಚ್ಚರಿಸಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

