ಬೆಂಗಳೂರು: ‘ಕಾಂತಾರ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆ ಈಗ ಗಾಂಧಿನಗರದಲ್ಲಿ ಕಾಡತೊಡಗಿದೆ. ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಮತ್ತು ‘ಕಾಂತಾರ’ ಚಿತ್ರದ ಅಧಿಕೃತ ಪೇಜ್ಗಳನ್ನು ಅನ್ಫಾಲೋ ಮಾಡಿದ್ದಾರೆ ಎಂದು ನೆಟ್ಟಿಗರು ಗುರುತಿಸಿದ್ದಾರೆ. ಇದು ‘ಕಾಂತಾರ ಚಾಪ್ಟರ್-2’ ಚಿತ್ರದ ಮೇಲೆ ಪರಿಣಾಮ ಬೀರಬಹುದೇ ಎಂಬ ಆತಂಕ ಸೃಷ್ಟಿಸಿದೆ.ರಿಷಬ್ ಶೆಟ್ಟಿ ಅವರು ಹೊಂಬಾಳೆ ಸಂಸ್ಥೆಯನ್ನು ಹೊರತುಪಡಿಸಿ, ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಲಿರುವ ‘ಹನುಮಾನ್’ ಚಿತ್ರಕ್ಕೆ ಸಹಿ ಹಾಕಿರುವುದು ಈ ಶೀತಲ ಸಮರಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್ 2’ ಅಬ್ಬರ: 250 ಕೋಟಿ ರೂಪಾಯಿ ಗಳಿಕೆಯತ್ತ ಚಿತ್ರ
ಹೊಂಬಾಳೆ ಸಂಸ್ಥೆಯು ‘ಕಾಂತಾರ’ ಸರಣಿಯ ಮತ್ತೊಂದು ಚಿತ್ರಕ್ಕಾಗಿ ಅಥವಾ ಮೂರನೇ ಭಾಗಕ್ಕಾಗಿ ರಿಷಬ್ ಅವರ ಡೇಟ್ಸ್ ಕೇಳಿತ್ತು, ಆದರೆ ರಿಷಬ್ ಅದನ್ನು ನಿರಾಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಕುತೂಹಲಕಾರಿ ವಿಷಯವೆಂದರೆ, ರಿಷಬ್ ಶೆಟ್ಟಿ ಅವರು ಹೊಂಬಾಳೆ ಸಂಸ್ಥೆಯ ಪೇಜ್ ಅನ್ಫಾಲೋ ಮಾಡಿದ್ದರೂ, ಆ ಸಂಸ್ಥೆಯ ಮಾಲೀಕರಾದ ವಿಜಯ್ ಕಿರಗಂದೂರು ಅವರನ್ನು ಇಂದಿಗೂ ಫಾಲೋ ಮಾಡುತ್ತಿದ್ದಾರೆ. ಇದು ಕೇವಲ ಸೋಷಿಯಲ್ ಮೀಡಿಯಾ ತಾಂತ್ರಿಕ ದೋಷವೇ ಅಥವಾ ವೃತ್ತಿಪರ ಭಿನ್ನಾಭಿಪ್ರಾಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

