ಕೊಲ್ಕತ್ತಾ: ರೊಮಾರಿಯೋ ಶಫರ್ಡ್ ಅವರ ಹ್ಯಾಟ್ರಿಕ್, ಶಿಮ್ರನ್ ಹೆಟ್ಮಯರ್ ಅವರ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಸ್ಕಾಟ್ಲೆಂಡ್ ವಿರುದ್ಧ ಸುಲಭ ಜಯ ಸಾಧಿಸಿತು.
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾ ಮುಖಿಯಾದವು.

ಇದನ್ನೂ ಓದಿ: ಶಾಸಕ ಆಶೋಕ್ ಕುಮಾರ್ ರೈಗೆ ಮಂತ್ರಿ ಸ್ಥಾನ ನೀಡಿ!: ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ ಆಗ್ರಹ
ಟಾಸ್ ಗೆದ್ದ ಸ್ಕಾಟ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಶಿಮ್ರನ್ ಹೆಟ್ಮಯರ್ ಅವರ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.
ತಂಡದ ಪರ ಶಿಮ್ರನ್ ಹೆಟ್ಮಯರ್ 36 ಎಸೆತಗಳಲ್ಲಿ 64, ಬ್ರಾಡನ್ ಕಿಂಗ್ 30 ಎಸೆತಗಳಲ್ಲಿ 35, ಶೇನ್ ರುಥರ್ಫೋರ್ಡ್ 26, ರೊಮ್ವನ್ ಪೊವಲ್ 24, ಶೈ ಹೋಪ್ 19 ರನ್ ಗಳಿಸಿದರು. ಸ್ಕಾಟ್ಲೆಂಡ್ ಪರ ಬ್ರಾಡ್ ಕರ್ರಿ 2 ವಿಕೆಟ್, ಸಫ್ಯಾನ್ ಶರೀಫ್, ಒಲಿವರ್ ಡೇವಿಡ್ಸನ್ ಮತ್ತು ಮೈಕಲ್ ಲೀಸ್ಕ್ ತಲಾ 1 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ತಂಡದ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ನಾಯಕ ರಚಿ ಬೆರ್ರಿಂಗ್ಟನ್ 24 ಎಸೆತಗಳಲ್ಲಿ 42 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ನೀಡದರೂ ಕೂಡ ರೊಮೊರಿಯೋ ಶೆಫರ್ಡ್ ಹ್ಯಾಟ್ರಿಕ್ ವಿಕೆಟ್ ನೊಂದಿಗೆ 5 ವಿಕೆಟ್ ಕಬಳಿಸಿ ಸ್ಕಾಟ್ಲೆಂಡ್ ತಂಡವನ್ನು ಕಟ್ಟಿಹಾಕಿದರು.
ಟಾಮ್ ಬ್ರೂಸ್ 28 ಎಸೆತಗಳಲ್ಲಿ 35, ಜಾರ್ಜ್ ಮುನ್ಸೆ 19, ಮಾರ್ಕ್ ವ್ಯಾಟ್ 15, ಬ್ರೆಂಡನ್ ಮೆಕ್ಮುಲೆನ್ 14, ಮ್ಯಾಥ್ಯು ಕ್ರಾಸ್ 11 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಶೆಫರ್ಡ್ 5, ಜಾಸನ್ ಹೋಲ್ಡರ್ 3, ಶಮರ್ ಜೋಸಫ್, ಗುದಕೇಶ್ ಮೋತಿ ತಲಾ ಒಂದು ವಿಕೆಟ್ ಪಡೆದರು.
18.5 ಓವರ್ಗಳಲ್ಲಿ ಸ್ಕಾಟ್ಲೆಂಡ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ 35 ರನ್ಗಳ ಸೋಲು ಕಂಡಿತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

