ದೆಹಲಿ: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಸಿಹಿ ಸುದ್ದಿ ನೀಡಿದೆ. ಆರ್‌ಆರ್‌ಬಿ ಜೂನಿಯರ್ ಎಂಜಿನಿಯರ್ (JE) ನೇಮಕಾತಿಯ ಅಧಿಸೂಚನೆ (CEN No. 04/2026) ಯಲ್ಲಿದ್ದ ಒಟ್ಟು ಹುದ್ದೆಗಳ ಸಂಖ್ಯೆಯನ್ನು 3,993 ರಿಂದ 4,029 ಕ್ಕೆ ಹೆಚ್ಚಿಸಲಾಗಿದೆ.
ಆಗಸ್ಟ್ 18, 2026 ರಂದು ಬಿಡುಗಡೆಯಾದ ತಿದ್ದುಪಡಿ ಪ್ರಕಟಣೆಯ (Corrigendum-1) ಪ್ರಕಾರ ಹೆಚ್ಚುವರಿಯಾಗಿ 36 ಹುದ್ದೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ಪ್ರಮುಖ ವಿವರಗಳು ಹಾಗೂ ದಿನಾಂಕಗಳು:
ಹುದ್ದೆಗಳ ವಿವರ: ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ (CMA – ಹೆಚ್ಚುವರಿ 35 ಹುದ್ದೆಗಳು) ಮತ್ತು ಜೆಇ/ಎಲೆಕ್ಟ್ರಿಕಲ್/ಟಿಆರ್‌ಎಸ್ (ಆರ್‌ಆರ್‌ಬಿ ಸಿಕಂದರಾಬಾದ್ ಅಡಿಯಲ್ಲಿ 1 ಹುದ್ದೆ).
ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಆಗಸ್ಟ್ 14, 2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 13, 2026.
ಅಧಿಕೃತ ಅರ್ಜಿ ವೆಬ್‌ಸೈಟ್: RRB Apply Portal ಅಥವಾ ಪ್ರಾದೇಶಿಕ ಆರ್‌ಆರ್‌ಬಿ ಬೆಂಗಳುರು ಅಧಿಕೃತ ಜಾಲತಾಣ.
ಇದನ್ನೂ ಓದಿ: ಪುತ್ತೂರು ಹಲ್ಲೆ ಪ್ರಕರಣ: ತಾವು ಏನೂ ಮಾಡಿದರೂ ನಮ್ಮ ಬೆಂಬಲಕ್ಕೆ ಸರ್ಕಾರ ಇದೆ ಎಂಬ ಧೈರ್ಯ ಅವರಿಗೆ: ಕಟೀಲ್ ಆಕ್ರೋಶ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತಗಳು:
ನಿಮ್ಮ ಪ್ರಾದೇಶಿಕ ರೈಲ್ವೆ ನೇಮಕಾತಿ ಮಂಡಳಿಯ (RRB) ಅಧಿಕೃತ ವೆಬ್‌ಸೈಟ್‌ಗೆ ಆರ್‌ಆರ್‌ಬಿ ವೆಬ್‌ಸೈಟ್ ಭೇಟಿ ನೀಡಿ.
ಮುಖಪುಟದಲ್ಲಿ CEN No. 04/2026 ನೇಮಕಾತಿ ಲಿಂಕ್ ಆಯ್ಕೆ ಮಾಡಿ.
ಅಧಿಸೂಚನೆ ಮತ್ತು ತಿದ್ದುಪಡಿ ಪ್ರಕಟಣೆಯನ್ನು (Corrigendum) ಸಂಪೂರ್ಣವಾಗಿ ಓದಿಕೊಳ್ಳಿ.
ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ನೋಂದಣಿ ಪ್ರಕ್ರಿಯೆ (Registration) ಪೂರ್ಣಗೊಳಿಸಿ.
ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
ನಿಮ್ಮ ಆದ್ಯತೆಯ ಆರ್‌ಆರ್‌ಬಿ ವಲಯ (Zone) ಮತ್ತು ಹುದ್ದೆಯನ್ನು ಆಯ್ಕೆ ಮಾಡಿ.
ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕವನ್ನು ಪಾವತಿಸಿ.
ಅರ್ಜಿಯನ್ನು ಮರುಪರಿಶೀಲಿಸಿ (Review) ಅಂತಿಮವಾಗಿ ಸಬ್‌ಮಿಟ್ (Submit) ಮಾಡಿ ಹಾಗೂ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

