Breaking News

ಪ್ರೀತಿಗಾಗಿ ತ್ಯಾಗ! ಹೆಂಡತಿಯನ್ನೇ ಅವಳ ಪ್ರೇಮಿಯ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟ ಬಿಹಾರದ ಪತಿ

ಸಮಸ್ತೀಪುರ (ಬಿಹಾರ): ಪ್ರೀತಿ ಮತ್ತು ತ್ಯಾಗಕ್ಕೆ ಸಂಬಂಧಿಸಿದಂತೆ ಬಿಹಾರದ ಸಮಸ್ತೀಪುರ ಜಿಲ್ಲೆಯಿಂದ ಅತ್ಯಂತ ಅಪರೂಪದ ಹಾಗೂ ಅಚ್ಚರಿಯ ಸುದ್ದಿಯೊಂದು ವರದಿಯಾಗಿದೆ. ತನ್ನ ಪತ್ನಿ ಮತ್ತೊಬ್ಬನನ್ನ ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಪತಿಯೊಬ್ಬ, ಅವಳ ಮೇಲೆ ಸಿಟ್ಟಾಗುವ ಬದಲು, ಅವಳ ಸುಖಕ್ಕಾಗಿ ತಾನೇ ನಿಂತು ಅವಳ ಮದುವೆಯನ್ನು ಪ್ರೇಮಿಯ ಜೊತೆ ಮಾಡಿಸಿ ಅದ್ದೂರಿಯಾಗಿ ಕಳುಹಿಸಿಕೊಟ್ಟಿದ್ದಾನೆ. ಸಮಸ್ತೀಪುರ ಜಿಲ್ಲೆಯ ದಲಸಿಂಗ್‌ಸರಾಯ್‌ನ ನಿವಾಸಿ ಸಂತೋಷ್ ರಾಮ್ ಎಂಬುವವರಿಗೆ ನೀಲಂ ದೇವಿ ಎಂಬಾಕೆಯೊಂದಿಗೆ ವಿವಾಹವಾಗಿತ್ತು. ಆರಂಭದಲ್ಲಿ ಇವರ ದಾಂಪತ್ಯ ಜೀವನ ಸುಗಮವಾಗಿತ್ತು. ಆದರೆ ಕಾಲಕ್ರಮೇಣ ನೀಲಂ ದೇವಿ ಅದೇ ಗ್ರಾಮದ ಧೀರಜ್ ಕುಮಾರ್ ಎಂಬ ಯುವಕನ ಪ್ರೇಮಪಾಶಕ್ಕೆ ಬಿದ್ದಿದ್ದರು. ಈ ವಿಚಾರ ಪತಿ ಸಂತೋಷ್‌ಗೆ ತಿಳಿದಾಗ ಮನೆಯಲ್ಲಿ ಗಲಾಟೆಯಾಗುವ ಬದಲು ಇಡೀ ಗ್ರಾಮವೇ ಬೆರಗಾಗುವಂತಹ ನಿರ್ಧಾರ ಹೊರಬಿದ್ದಿದೆ.

ಪತ್ನಿಯ ಪ್ರೇಮದ ವಿಷಯ ತಿಳಿದ ನಂತರ ಗ್ರಾಮದಲ್ಲಿ ಪಂಚಾಯತ್ ಕರೆಯಲಾಗಿತ್ತು. ಈ ವೇಳೆ ಸಂತೋಷ್ ಅವರು, “ನನ್ನ ಪತ್ನಿ ಬೇರೊಬ್ಬರನ್ನು ಇಷ್ಟಪಡುತ್ತಿರುವಾಗ ನಾನು ಅವಳನ್ನು ಬಲವಂತವಾಗಿ ಇಲ್ಲಿರಿಸಿಕೊಳ್ಳುವುದು ಸರಿಯಲ್ಲ. ಅವಳು ಯಾರನ್ನು ಇಷ್ಟಪಡುತ್ತಾಳೆಯೋ ಅವರ ಜೊತೆಗೇ ಬದುಕಲಿ” ಎಂದು ದೊಡ್ಡತನ ತೋರಿದರು. ಸಂತೋಷ್ ಅವರ ಸಮ್ಮತಿಯ ಮೇರೆಗೆ ಪಂಚಾಯತ್‌ನ ಸಮ್ಮುಖದಲ್ಲಿ ನೀಲಂ ದೇವಿ ಮತ್ತು ಪ್ರೇಮಿ ಧೀರಜ್ ಕುಮಾರ್‌ಗೆ ವಿವಾಹ ಮಾಡಿಸಲಾಯಿತು. ಧೀರಜ್ ಎಲ್ಲರ ಮುಂದೆ ನೀಲಂಗೆ ಸಿಂಧೂರವನ್ನಿಟ್ಟು ಪತ್ನಿಯನ್ನಾಗಿ ಸ್ವೀಕರಿಸಿದನು.ಮದುವೆಯ ನಂತರ ಪತಿ ಸಂತೋಷ್ ತಾನೇ ನಿಂತು ಪತ್ನಿಯನ್ನು ಪ್ರೇಮಿಯ ಜೊತೆ ಕಳುಹಿಸಿಕೊಟ್ಟಿದ್ದಾನೆ.

Advertisement

ಇದನ್ನೂ ಓದಿ: ತ್ರಿಶೂರಿನಲ್ಲಿ ಯುವಕನನ್ನು ಎತ್ತಿ ಎಸೆದ ದೇಗುಲದ ಆನೆ

ಈ ಘಟನೆಯನ್ನು ಕಂಡ ಗ್ರಾಮಸ್ಥರು ಹಿಂದಿ ಸಿನಿಮಾ ‘ಹಮ್ ದಿಲ್ ದೇ ಚುಕೇ ಸನಮ್’ (Hum Dil De Chuke Sanam) ಕಥೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತಿ ಸಂತೋಷ್ ಅವರ ಈ “ತ್ಯಾಗ” ಮತ್ತು “ದೊಡ್ಡ ಗುಣ”ಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು