ಮೊಬೈಲ್ ಕೆಟ್ಟು ಹೋದರೆ ಮೊಬೈಲ್ ಶಾಪ್ಗಳಿಗೆ ಅಥವಾ ಮೊಬೈಲ್ ಕಂಪನಿಗಳ ಸರ್ವಿಸ್ ಸೆಂಟರ್ಗಳಿಗೆ ಹೋಗಿ ಮೊಬೈಲ್ ಕೊಟ್ಟು ಬರುತ್ತೇವೆ. ಹೀಗೆ ನೀಡಿ ಬರುವಾಗ ನಮ್ಮ ನಿಮ್ಮೆಲ್ಲರ ಡೇಟಾ ಎಷ್ಟು ಗೌಪ್ಯವಾಗಿರುತ್ತದೆ ಎಂದು ಈ ವಿಡಿಯೋ ನೋಡಿದ ಮೇಲೆ ಅನುಮಾನ ಬಾರದೆ ಇರದು.
ಗ್ರಾಹಕರೊಬ್ಬರು, ಸ್ಯಾಮ್ಸಂಗ್ ಸರ್ವಿಸ್ ಸೆಂಟರ್ಗೆ ಹೋಗಿ ತಮ್ಮ ಮೊಬೈಲ್ ನೀಡಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಗ್ರಾಹಕನ ಡೇಟಾ ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿರುವ ವಿಡಿಯೋವೊಂದು ಸಾಮಾಜಿಲ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರೊಬ್ಬರು ವಿಡಿಯೋವನ್ನು ಹಂಚಿಕೊಂಡು, ರಿಪೇರಿಗಾಗಿ ಭಾರತದಲ್ಲಿನ ಸ್ಯಾಮ್ಸಂಗ್ ಸರ್ವಿಸ್ ಸೆಂಟರ್ವೊಂದಕ್ಕೆ ತನ್ನ ಮೊಬೈಲ್ ನೀಡಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ಮೊಬೈಲ್ ಪರಿಶೀಲಿಸುವ ನೆಪದಲ್ಲಿ ಸಿಬ್ಬಂದಿಯು ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಗ್ರಾಹಕನ ಪ್ರಕಾರ, ತನ್ನ ಒಪ್ಪಿಗೆಯಿಲ್ಲದೆ ವೈಯಕ್ತಿಕ ಅಪ್ಲಿಕೇಶನ್ಗಳಿಗೆ ಭೇಟಿ ನೀಡಿದ್ದು, ಗ್ಯಾಲರಿಯನ್ನು ಸುಮಾರು 10 ನಿಮಿಷ ಹಾಗೂ ವಾಟ್ಸಾಪ್ ಅನ್ನು ಸುಮಾರು 2 ನಿಮಿಷ ಬಳಸಲಾಗಿದೆ.
ಇದನ್ನೂ ಓದಿ: ಈತ ʼಚೈನೀಸ್ ಟ್ರಂಪ್ʼ: ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್
ಈ ಬಗ್ಗೆ ಗ್ರಾಹಕ ಆಕ್ಷೇಪ ವ್ಯಕ್ತಪಡಿಸಿದಾಗ ಆರಂಭದಲ್ಲಿ ಕೇಂದ್ರದ ವ್ಯವಸ್ಥಾಪಕರು ಸಹಕರಿಸಿದ್ದಾರೆ. ಬಳಿಕ ಪರೋಕ್ಷ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ಗ್ರಾಹಕ ಆರೋಪಿಸಿದ್ದಾನೆ. ಅಲ್ಲದೆ, ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದಾಗ ಕೊಡಲು ನಿರಾಕರಿಸಿದ ಸರ್ವಿಸ್ ಸೆಂಟರ್ ವ್ಯವಸ್ಥಾಪಕರು, ಕೇವಲ 2 ನಿಮಿಷಗಳ ದೃಶ್ಯಾವಳಿಗಳನ್ನಷ್ಟೇ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಗ್ರಾಹಕರ ಡೇಟಾ ಮತ್ತು ಗೌಪ್ಯತೆ ಉಲ್ಲಂಘನೆಯ “ಘಟನೆಯ ಪುರಾವೆ” ಎಂದು ಬರೆದುಕೊಂಡಿದ್ದು, ಈ ಬಗ್ಗೆ ಗ್ರಾಹಕ ಸಹಾಯವಾಣಿ ಮತ್ತು ಪೊಲೀಸರಿಗೆ ದೂರು ನೀಡಿರುವುದಾಗಿ ಗ್ರಾಹಕನು ತಿಳಿಸಿದ್ದಾನೆ. ಈ ವಿಡಿಯೋವನ್ನು ಆಪಲ್ ಡಿಸೈನ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸರ್ವಿಸ್ ಸೆಂಟರ್ನ ಸಿಬ್ಬಂದಿಯು ಮೊಬೈಕ್ ಸ್ಕ್ರೀನ್ ಸ್ಕ್ರೋಲ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
🚨 Samsung service centre allegedly caught breaching customer data and privacy
The person who posted the video claimed he visited a Samsung service centre in India to get his phone repaired but later noticed suspicious activity in screen time. According to him, personal apps… pic.twitter.com/8Q4k5f5Dl3
— Apple Design (@TheAppleDesign) January 11, 2026
ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

